Header Ads
Header Ads
Header Ads
Breaking News

ಬಿಜೆಪಿ ಆಯೋಜಿಸಿದ ಮಂಗಳೂರು ಚಲೋ ಪ್ಲಾಪ್ ಶೋ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಶಕ್ತಿಶಾಲಿಯಾಗಲಿದೆ ಮಂಗಳೂರಿನಲ್ಲಿ ಐವನ್ ಡಿಸೋಜಾ ಹೇಳಿಕೆ

ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಮಂಗಳೂರು ಚಲೋ ಸಂಪೂರ್ಣ ಯಶ್ವಸಿಯಾಗಿಲ್ಲ, ಇದು ಪ್ಲಾಪ್ ಶೋ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವ್ಯಂಗ್ಯ ಮಾಡಿದರು.

ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು 1 ಲಕ್ಷ ಜನ ತರಿಸುವ ಯೋಜನೆಯಿತ್ತು. 5000 ಜನರನ್ನೂ ಕುಳ್ಳಿರಿಸಲು ಸಾಧ್ಯವಾಗಿಲ್ಲ. ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಕಳೆದ ಭಾರಿಗಿಂದ ಹೆಚ್ಚು ಶಕ್ತಿಶಾಲಿಯಾಗಲಿದೆ.ಕಳೆದ ಬಾರಿ ಬಿಜೆಪಿ 2 ಸೀಟು ಪಡೆದಿತ್ತು. ರಾಜ್ಯದಲ್ಲಿ ಜನರು ಬಿಜೆಪಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.
ರಿಪೋರ್ಟ್ ಆಧಾರದಲ್ಲಿ ಬಿಜೆಪಿ ಗೆಲ್ಲುತ್ತೇವೆಂಬ ಭ್ರಮೆ ಬೇಡ ಅಂತಾ ಅವರು ಹೇಳಿದರು.

ವರದಿ: ನಾಗೇಶ್ ಕಾವೂರು

Related posts

Leave a Reply