Header Ads
Header Ads
Breaking News

ಬಿಜೆಪಿ ಇತರೆ ಪಕ್ಷಗಳನ್ನು ನಾಶ ಮಾಡಲು ಹೊರಟಿದೆ, ಉಡುಪಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ

ಬಿಜೆಪಿಯಿಂದ ಗುಜರಾತ್ ಶಾಸಕರ ಹೈಜಾಕ್‌ಗೆ ಹೆದರಿ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಚುನಾವಣ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಲು ಹೊರಟಿದೆ. ಅಂದು ಕಾಂಗ್ರೆಸ್ ಕೂಡಾ ಜೆಡಿಎಸ್ ನ ೭ ಶಾಸಕರನ್ನು ಹೈಜಾಕ್ ಮಾಡಿ ಲಾಭ ಪಡೆದಿತ್ತು. ಕಾಂಗ್ರೆಸಿನದ್ದು ಮಾಡಿದುಣ್ಣೋ ಮಾರಾಯ ಎಂಬ ಪರಿಸ್ಥಿತಿಯಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಬಿಜೆಪಿ ಇತರ ಪಕ್ಷಗಳನ್ನು ನಾಶ ಮಾಡಲು ಹೊರಟಿದೆ ಎಂದು ಆರೋಪಿಸಿದರು. ಕೆರೆಗಳಿಗೆ ನೀರು ಹಾಯಿಸಿ ಅಂತ ನಾನು ಹೇಳಿರುವ ವಿಚಾರದಲ್ಲಿ ಸಿಎಂ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಾನು ಕೃಷಿಗೆ ನೀರು ಬಿಡಿ ಅಂದಿಲ್ಲ. ರಾಜ್ಯದ ನಾಲ್ಕು ಜಲಾಶಯಗಳು ಇರೋದು ಪಕ್ಕದ ರಾಜ್ಯಕ್ಕೆ ನೀರು ಬಿಡಲಾ ಎಂದು ಪ್ರಶ್ನಿಸಿದೆ. ಜಲಾಶಯಗಳಲ್ಲಿರುವ ಒಂದು ಭಾಗ ನೀರನ್ನು ಕೆರೆಗಳಿಗೆ ಹರಿಸಿ ಎಂದು ಅಗ್ರಹಿಸಿದೆ. ಅವ್ರು ಹಾರಂಗಿ ಜಲಾಶಯದ ನೀರು ಪಕ್ಕದ ರಾಜ್ಯಕ್ಕೆ ಹರಿಯುವುದನ್ನು ತಡೆಯಬೇಕು ಎಂದರು.
ಇನ್ನು ಲಿಂಗಾಯತ ಪ್ರತ್ಯೇಕ ಧರ್ಮದಿಂದ ಯಾರಿಗೂ ಲಾಭನೂ ಇಲ್ಲ ನಷ್ಟನೂ ಇಲ್ಲ. ಚುನಾವಣೆ ಬಂದಾಗ ಇಂತದೆಲ್ಲ ಹುಟ್ಟಿಕೊಳ್ಳುತ್ತದೆ. ಆ ಸಮಾಜದ ಗುರುಗಳಿಗೆ ಈ ವಿಚಾರ ಬಿಟ್ಟು ಬಿಡಿ ಎಂದರು. ಜಮೀರ್ ರುಂಡ ಕತ್ತರಿಸುವ ಹೇಳಿಕೆ ಬಗ್ಗೆ ಪ್ರತಿಕೀಯಿಸಿದ ಕುಮಾರಸ್ವಾಮಿ ಜಮೀರ್‌ಗೆ ರುಂಡ ಕತ್ತರಿಸುವುದು ಸುಲಭ. ಅದು ಅವರಿಗೆ ಬಿಟ್ಟ ವಿಚಾರ ಭಾವೋದ್ವೇಗದ ಮಾತುಗಳನ್ನು ಬಿಟ್ಟು ಬಿಡಿ. ನಿಮ್ಮ ಕುಟುಂಬದಲ್ಲಿ ಆತಂಕ ಸೃಷ್ಟಿ ಮಾಡಬೇಡಿ ಎಂದರು. ಕರಾವಳಿಯಲ್ಲಿನ ಕೋಮು ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಸಿಎಂ ಹಲವು ದಿನ ಮೌನವಾಗಿದ್ದರು. ಗೃಹ ಇಲಾಖೆ ರೈ ಅವರ ಪಾಲಗುತ್ತದೆ ಎಂದು ಹೇಳಲಾಗುತ್ತಿದೆ. ರಮಾನಾಥ ರೈ ಹೆಸರಿಗೆ ಮಾತ್ರ ಗೃಹ ಮಂತ್ರಿ. ಆದ್ರೆ ನಿಜವಾದ ಗೃಹ ಮಂತ್ರಿ ಕೆಂಪಯ್ಯ. ರೈ ಹೆಬ್ಬೆಟ್ಟು ಒತ್ತಲು ಮಾತ್ರ ಗೃಹ ಮಂತ್ರಿಯಾಗುತ್ತಾರೆ ಎಂದು ಲೇವಡಿ ಮಾಡಿದರು. ಯiವುದೇ ಇಲಾಖೆಯಲ್ಲಿ ಹಣ ಬಳಕೆ ಆಗಿಲ್ಲ. ಅಲ್ಪಸಂಖ್ಯಾತ ಇಲಾಖೆ ಇದರಿಂದ ಹೊರತಾಗಿಲ್ಲ. ಈ ಸರ್ಕಾರಕ್ಕೆ ದೂರದೃಷ್ಟಿತ್ವ ಇಲ್ಲ. ಅಹಿಂದ ಬರೇ ಘೋಷಣೆಗೆ ಮಾತ್ರ. ಅಲ್ಪಸಂಖ್ಯಾತರ ಹಣ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದರು.

Related posts

Leave a Reply