
ಮುಂಬರುವ ಗ್ರಾ.ಪಂ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪರ ನಿಲ್ಲಲಿದ್ದಾರೆ. ಬಿಜೆಪಿ ಸರಕಾರದ ಬಗ್ಗೆ ಜನ ಬೇಸತ್ತು ಹೋಗಿದ್ದಾರೆ.ಬಿಜೆಪಿ ಏನು ಮಾಡಿದೆ ಅಂತಾ ವೋಟ್ ನೀಡಬೇಕು?. ಸರಕಾರದ ಯಾವುದೇ ಯೋಜನೆಗಳು ತಲುಪುತ್ತಿಲ್ಲ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇರುವ ಯೋಜನೆಗಳಿಗೂ ಕತ್ತರಿ ಹಾಕಲಾಗಿದೆ. ಸರಕಾರದ ವಿರುದ್ಧ ರೈತರು ಬೀದಿಗೆ ಬಂದು ನಿಂತಿದ್ದಾರೆ. ದರ ಏರಿಕೆ ಜನರ ಮೇಲೆ ಪರಿಣಾಮ ಬೀರಿದೆ. ಹೀಗಿದ್ದ ಮೇಲೂ ಬಿಜೆಪಿಗೆ ಜನ ವೋಟ್ ನೀಡಬೇಕೆ?. ಬಿಜೆಪಿ ಜನಸಾಮಾನ್ಯರ ವಿರೋಧಿ ಸರಕಾರವಾಗಿದೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಐವನ್ ಡಿಸೋಜಾ, ಪ್ರಸಾದ್ ಕಾಂಚನ್, ಮತ್ತಿತರರು ಉಪಸ್ಥಿತರಿದ್ದರು.