Header Ads
Header Ads
Breaking News

ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಹಲ್ಲೆ. ತೊಕ್ಕೊಟ್ಟು ಒಳಪೇಟೆಯ ಬಾರಿನಲ್ಲಿ ತಡರಾತ್ರಿ ವೇಳೆ ಘಟನೆ.

ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿ ಬಿಜೆಪಿಯ ಅಭ್ಯರ್ಥಿ ಸೋಲಿಗೆ ಕಾರಣರಾದರೆಂದು ಆರೋಪಿಸಿ ಬಿಜೆಪಿ ಪಕ್ಷದ ಮೂವರು ಕಾರ್‍ಯಕರ್ತರು ಬಾರಿನೊಳಕ್ಕೆ ನುಗ್ಗಿ ಕಾಂಗ್ರೆಸ್ ಕಾರ್‍ಯಕರ್ತರಿಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತೊಕ್ಕೊಟ್ಟು ಮೂನ್‌ಲೈಟ್ ಬಾರಿನಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ಕೃಷ್ಣನಗರ ನಿವಾಸಿಗಳಾದ ಜಾರ್ಜ್ ಲೋಬೊ ಮತ್ತು ಮೋಹನದಾಸ್ ದಾಳಿಗೆ ಒಳಗಾದವರು. ನಿನ್ನೆ ರಾತ್ರಿ ವೇಳೆ ಬಾರಿನ ಒಳಗಡೆ ಕುಳಿತಿದ್ದ ಸಂದರ್ಭ ಸ್ಥಳೀಯ ನಿವಾಸಿಗಳೇ ಆಗಿರುವ ಈ ಹಿಂದೆಯೂ ಕ್ರಿಮಿನಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಕಾರ್‍ಯಕರ್ತರೆನ್ನಲಾದ ಕವಿತ್ ಪೂಜಾರಿ , ಅರುಣ್ ಭಂಡಾರಿ ಯಾನೆ ಮಡ್ಡಿ, ಸುನಿ ಬೆಳ್ಚಾಡ ಯಾನೆ ಚಟ್ನಿ ಎಂಬವರು ಸೇರಿಕೊಂಡು ಬಾರಿನೊಳಕ್ಕೆ ನುಗ್ಗಿ ಬಿಯರ್ ಬಾಟಲಿಯಿಂದ ಇಬ್ಬರ ಮೇಲೂ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕವೂ ನಿರಂತರವಾಗಿ ಕಾಂಗ್ರೆಸ್ ಕಾರ್‍ಯಕರ್ತರಿಗೆ ಬೆದರಿಕೆಯನ್ನು ಒಡ್ಡುತ್ತಲೇ ಬಂದಿದ್ದರೆಂದು ಗಾಯಾಳುಗಳು ಆರೋಪಿಸಿದ್ದಾರೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply