Header Ads
Header Ads
Breaking News

ಬಿಜೆಪಿ ಕಾರ್ಯಕರ್ತರ ಮನೆ ಮನೆಯಲ್ಲಿ ಅಭಿಯಾನ : ಪುತ್ತೂರಿನ ಬನ್ನೂರಿನಲ್ಲಿ ನಡೆದ ಕಾರ್ಯಕ್ರಮ

ಜಾತಿ ಆಧಾರದಲ್ಲಿ ಮೀಸಲಾತಿ ತೆಗೆದು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಒದಗಿಸಿದ ಸರಕಾರ ಇದ್ದರೆ ಅದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರು ಗುರುವಾರ ಸಂಜೆ ಪುತ್ತೂರು ಬಿಜೆಪಿ ವತಿಯಿಂದ ಮುಂದಿನ ಚುನಾವಣೆ ಅಂಗವಾಗಿ ತಾಲೂಕಿನ ಕಾರ್ಯಕರ್ತರ ಮನೆ ಮನೆಗಳಲ್ಲಿ ಬಿಜೆಪಿ ಪಕ್ಷದ ಸ್ಟಿಕ್ಕರ್ ಹಾಗೂ ಧ್ವಜ ಕಟ್ಟುವ ಕಾರ್ಯಕ್ರಮಕ್ಕೆ ಬನ್ನೂರು ಕರ್ಮಲದಲ್ಲಿರುವ ಬಿಜೆಪಿ ಜಿಲ್ಲಾ ಸಮಿತಿ ಪದಾಧಿಕಾರಿ ಗೋಪಾಲಕೃಷ್ಣ ಹೇರಳೆ ಅವರ ಮನೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ವೇದಿಕೆಯಲ್ಲಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಗರಸಭಾ ಸದಸ್ಯರಾದ ಜೀವಂಧರ್ ಜೈನ್, ಸಂತೋಷ್ ಕುಮಾರ್ ಬೊಳುವಾರು, ಜಿಲ್ಲಾ ಸಮಿತಿ ಪದಾಧಿಕಾರಿ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು. ಸಭೆಯಲ್ಲಿ ನಗರಸಭಾ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *