Header Ads
Breaking News

ಬಿಜೆಪಿ ಜಾತಿ ಜಾತಿ ಸಂಘರ್ಷಕ್ಕೆ ಇಳಿದಿದೆ : ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿಕೆ

ಬಿಜೆಪಿಗೆ ಆಡಳಿತ ಪಕ್ಷದಲ್ಲಿರುವಾಗ ಒಂದು ಕಾನೂನು ವಿರೋಧ ಪಕ್ಷದಲ್ಲಿದ್ದಾಗ ಇನ್ನೊಂದು ಕಾನೂನು. ಇದೀಗ ಜಾತಿ ಜಾತಿ ಸಂಘರ್ಷಕ್ಕೆ ಬಿಜೆಪಿ ಇಳಿದಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು. ಅವರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ರಾಜಕೀಯಕ್ಕೆ ಬಂದ ಮೇಲೆ ಜಾತಿ ಧರ್ಮ ಎಲ್ಲಾ ಬಿಟ್ಟು ಬರಬೇಕು. ರಾಜಕೀಯಕ್ಕೆ ಬಂದ ಮೇಲೆ ಅವರು ರಾಜಕಾರಣಿಗಳು ಅದನ್ನು ಬಿಟ್ಟು ಜಾತಿ ಜಾತಿ ಸಂಘರ್ಷಕ್ಕೆ ಇಳಿಯುವುದು ಸರಿಯಲ್ಲ. ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು. ಅವರೊಬ್ಬ ಕಾವಿಧಾರಿ, ಕಾವಿಧಾರಿಗಳ ಮೇಲೆ ನಮಗೆ ಗೌರವ ವಿದೆ. ಕಾವಿ ಧರಿಸಿದ ರಾಜಕಾರಣಿಗಳು ತಾನು ಮಾಡಿದ ತಪ್ಪುಗಳಿಗೆ ಗುರಾಣಿಯಾಗಿ ಬಳಸಿಕೊಳ್ಳಬಾರದು. ರಾಜಕೀಯದಲ್ಲಿ ಟೀಕೆಗಳು ಬಂದ ತಕ್ಷಣ ಜಾತಿ ಧರ್ಮವನ್ನು ಎತ್ತುಕಟ್ಟುವುದು ಬಿಜೆಪಿಗರಿಗೆ ಶೋಭೆ ತರುವಂತದಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್. ಲೋಬೋ, ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಹರಿನಾಥ್, ಟೀಕೆ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *