Header Ads
Header Ads
Header Ads
Breaking News

ಬಿಜೆಪಿ ಜಿಲ್ಲಾ ಜನಪ್ರತಿನಿಧಿಗಳಿಗೆ ತರಭೇತಿ ಕಾರ್ಯಗಾರ

ಕಾಸರಗೋಡು: ಬಿಜೆಪಿ ಜಿಲ್ಲಾ ಪ್ರತಿನಿಧಿಗಳಿಗೆ ಏಕ ದಿನ ತರಭೇತಿ ಕಾರ್ಯಗಾರ ನಡೆಯಿತು. ಕಾಸರಗೋಡು ಟೌನ್ ಬ್ಯಾಂಕ್ ಶತಾಭ್ದಿ ಸಭಾಂಗಣದಲ್ಲಿ ನಡೆದ ಕಾರ್ಯಗಾರಕ್ಕೆ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸಿ ಕೆ ಪದ್ಮನಾಭನ್ ಚಾಲನೆ ನೀಡಿದರು.

ಪಂಚಾಯತ್ ರಾಜ್ ಆದಳಿತ ಕಾನೂನು ಖಾಯಿದೆ ಮತ್ತು ಯೋಜನೆಗಳ ಕುರಿತು ಜನಪ್ರತಿನಿಧಿಗಳಿಗೆ ಅರಿವು ಮೂಡಿಸುವುದಕ್ಕಾಗಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಬಗ್ಗೆ ಮಾತನಾಡಿದ ಪದ್ಮನಾಭನ್ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪ್ರತಿಯೊಂದು ಕಾಲಘಟ್ಟದಲ್ಲೂ ಜನರ ಆವಶ್ಯಕತೆಗನುಸಾರವಾಗಿ ಕಾರ್ಯಪ್ರಬುದ್ದರಾಗಬೇಕಾಗಿದೆ. ಅವರ ಬೇಡಿಕೆಗಳಿಗೆ ಸೂಕ್ತ ಸ್ಪಂಧನೆ ನೀಡಲು ಯಾವುದೇ ಸಮಯದಲ್ಲೂ ಜನಪ್ರತಿನಿಧಿಗಳು ತಯಾರಾಗಬೇಕೆಂಬುದಾಗಿ ಅವರು ಕರೆ ನೀಡಿದರು.

ಕೆ ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ ಕಾರ್ಯಗಾರದಲ್ಲಿ ನೇತಾರರಾದ ಪ್ರಮೀಳಾ ಸಿ ನಾಯ್ಕ್, ಎಂ ಸಂಜೀವ ಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡರು

Related posts

Leave a Reply