Header Ads
Header Ads
Header Ads
Breaking News

ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆ ಇಂದು ಸಂಜೆ ೬ಗಂಟೆಗೆ ಭಟ್ಕಳದಲ್ಲಿ ಸಮಾವೇಶ

ಭಟ್ಕಳ ತಾಲೂಕಿನಲ್ಲಿ ಭಾರತೀಯ ಜನತಾ ಪಾರ್ಟಿ ರಾಜ್ಯ ಘಟಕದಿಂದ ಆರಂಭಗೊಂಡ ಬಿಜೆಪಿಯ ‘ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ಇಂದು ೬ ಘಂಟೆಗೆ ಆಗಮಿಸಲಿದ್ದು, ಸಂಜೆ ತಾಲೂಕಿನ ಸಾಗರ ರಸ್ತೆಯಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ವೇದಿಕೆಯನ್ನು ಸಜ್ಜುಗೊಂಡಿದೆ.

ಬಿಜೆಪಿ ‘ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯೂ ರಾಜ್ಯಾದ್ಯಂತ 224 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಯಾತ್ರೆ ಸಂಚರಿಸಲಿದ್ದು, ಇಂದು ಭಟ್ಕಳಕ್ಕೆ ಸಂಜೆ ೬ ಗಂಟೆಗೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿ ಸಂಪುರ್ಣ ಕೆಸರಿಮಯವಾಗಿದ್ದು, ಬಿಜೆಪಿ ಬಾವುಟವೂ ಎಲ್ಲೆಡೆ ರಾರಾಜಿಸುತ್ತಿವೆ. ಸಂಜೆ ತಾಲೂಕಿನ ಗಡಿ ಭಾಗವಾದ ಗೊರಟೆಯಲ್ಲಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರನ್ನು ಸ್ವಾಗತಿಸಿ ಭಟ್ಕಳದ ಸಂಶುದ್ದೀನ್ ಸರ್ಕಲ್‌ನಿಂದ ಬೃಹತ್ ಮೆರವಣಿಗೆಯ ಮೂಲಕ ತಾಲುಕಿನ ಸಾಗರ ರಸ್ತೆಯಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನಕ್ಕೆ ಕರೆತರಲಾಗುವುದು. ಇನ್ನು ಸಾರ್ವಜನಿಕರನ್ನುದ್ದೇಶಿಸಿ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇನ್ನುಳಿದ ಬಿಜೆಪಿ ನಾಯಕರು, ಕೇಂದ್ರ ಸಚಿವರು ಮಾತಾಡಲಿದ್ದು ಈ ಹಿನ್ನೆಲೆಯಲ್ಲಿ ತಾಲುಕಿನ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜುಗೊಂಡಿದೆ.

Related posts

Leave a Reply