Breaking News

ಬಿಜೆಪಿ ನಾಯಕರ ಬರ ಪ್ರವಾಸ ರಾಜಕೀಯ ತಂತ್ರ-ಐವನ್ ಡಿ ಸೋಜಾ

ಮಾಜಿ ಸಿಎಂ ಬಿಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಬರಗಾಲ ಅಧ್ಯಯನ ಯಾತ್ರೆಯು ಬಿಎಸ್‌ವೈ ಮತ್ತು ಕೆ.ಎಸ್. ಈಶ್ವರಪ್ಪ ಅವರನ್ನು ಒಂದು ಮಾಡುವ ತಂತ್ರ ಮತ್ತು ರಾಜಕೀಯ ಗಿಮಿಕ್ ಆಗಿದೆ. ಆ. ಮೂಲಕ ಬಿಜೆಪಿ ರೈತರ ಹೆಸರು ಹೇಳಿಕೊಂಡು ರೈತರಿಗೆ ಮೋಸ ಮಾಡುತ್ತಿದೆ ಎಂದು ವಿಧಾನಪರಿಷತ್‌ನ ಮುಖ್ಯ ಸಚೇತಕ ಐವಾನ್ ಡಿಸೋಜಾ ಆರೋಪಿಸಿದರು.

ಅವರು ಮಂಗಳೂರು ಮಹಾನಗರ ಪಾಲಿಕೆಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಾವಾಗ ಬರ ವೀಕ್ಷಣೆಗೆ ಹೋಗಬೇಕಿತ್ತೋ ಆಗ ಹೋಗಿಲ್ಲ. ಇದೀಗ ಮಳೆಗಾಲ ಆರಂಭದಲ್ಲಿ ಕಾಟಾಚಾರಕ್ಕೆ ಬರ ವೀಕ್ಷಣೆ ತೆರಳುತ್ತಿದ್ದಾರೆ. ಬಿಎಸ್‌ವೈ ಮತ್ತು ಈಶ್ವರಪ್ಪ ನಡುವಿನ ಒಳ ಜಗಳ ಶಮನವಾಗಿದೆ. ಎಂದು ತೋರಿಸುವ ಪ್ರಯತ್ನವಾಗಿ ರೈತರ ಹೆಸರಿನಲ್ಲಿ ಬರ ಅಧ್ಯಯನವನ್ನು ನಡೆಸುತ್ತಿದ್ದಾರೆ ಎಂದು ಆಪಾಧಿಸಿದರು.

Related posts

Leave a Reply