Header Ads
Header Ads
Header Ads
Breaking News

ಬಿಜೆಪಿ ಪರಿವರ್ತನಾ ಯಾತ್ರೆ ರಾಜಕೀಯ ಬದಲಾವಣೆ ದಿಕ್ಸೂಚಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಪುತ್ತೂರಿನಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿಕೆ

 

ಪುತ್ತೂರು: ರಾಜ್ಯದ ಮತದಾರರ ಒಲವು ಬಿಜೆಪಿಯ ಕಡೆ ಸ್ಪಷ್ಟವಾಗಿದ್ದು, ಚುನಾವಣಾ ಪೂರ್ವಭಾವಿಯಾಗಿ 75 ದಿನಗಳ ಕಾಲ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಯಶಸ್ಸು ಮುಂದಿನ ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಿದೆ. ರಾಜ್ಯ ಬಿಜೆಪಿ ನಿಶ್ಚಿತವಾಗಿ 150 ಸ್ಥಾನಗಳ ಗುರಿ ತಲುಪಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಕೇಂದ್ರ ಅನುಷ್ಠಾನ ಮತ್ತು ಸಾಖ್ಯಿಕ ಇಲಾಖಾ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಅವರು ಪುತ್ತೂರು ನಗರಮಂಡಲ ಬಿಜೆಪಿ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಒಡೆದು ಆಳುವ ನೀತಿಯಿಂದ ಜನ ರೋಸಿ ಹೋಗಿದ್ದಾರೆ. ಮುಂದಿನ ಬಾರಿ ಬಿಜೆಪಿಗೆ ಅಧಿಕಾರ ನೀಡಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಎಲ್ಲಾ 224 ಕ್ಷೇತ್ರಗಳಲ್ಲೂ ನೇರ ಸ್ಫರ್ಧೆ ನಡೆಯಲಿದೆ. ಜೆಡಿ‌ಎಸ್ ಮತ್ತು ಇತರ ಸಣ್ಣಪುಟ್ಟ ಪಕ್ಷಗಳ ರಾಜಕೀಯ ಹೋರಾಟ ಇಲ್ಲಿ ಮುಖ್ಯವಾಗುವುದಿಲ್ಲ ಎಂದರು.

ರಾಜ್ಯದ ಬಿಜೆಪಿ ನಾಯಕರ ನಡುವೆ ಈಗ ಯಾವುದೇ ರೀತಿಯ ಅಭಿಪ್ರಾಯ ಬೇಧಗಳಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿಯ ಬಳಿಕ ಬಿಜೆಪಿಯ ಎಲ್ಲಾ ನಾಯಕರು ಏಕಮುಖವಾಗಿ ಸಾಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ಜನರ ಮೆಚ್ಚುಗೆ ಗಳಿಸಿದೆ. ಈ ಕಾರಣದಿಂದ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಾ, ರಾಜಕೀಯವಾಗಿ ದುರ್ಬಲಗೊಳ್ಳುತ್ತಿದೆ ಎಂದು ಹೇಳಿದರು. ಅಲ್ಲದೆ ರಾಜ್ಯದ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಡಿವಿ ವಿಶ್ಲೇಷಿಸಿದರು.

ಜಿಲ್ಲೆಯ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರ ತಾಯಿ ಮಹಾಮಾತೆ ದೇಯಿ ಬೈದೇತಿಯ ಪ್ರತಿಮೆಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಬೇಕು. ಪಾರದರ್ಶಕ ತನಿಖೆಯಿಂದ ಸತ್ಯ ಹೊರಬರಬೇಕು. ಈ ಮೂಲಕ ಅವಳಿ ವೀರ ಪುರುಷರ ಮೇಲಿನ ನಂಬಿಕೆಗೆ ಆದ ಅಪಚಾರಕ್ಕೆ ಉತ್ತರ ಸಿಗಬೇಕು. ಕೇವಲ ತುಷ್ಠೀಕರಣದ ಕಾರಣಕ್ಕಾಗಿ ಇಂತಹ ಧಾರ್ಮಿಕ ನಂಬಿಕೆಯ ಪ್ರಕರಣಗಳನ್ನು ಮುಚ್ಚಿ ಹಾಕುವುದು ಸರಿಯಲ್ಲ ಎಂದು ಸಚಿವರು ಅಭಿಪ್ರಾಯಿಸಿದರು.

ಈ ಸಂದರ್ಭ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಎಸ್. ಅಶೋಕ್ ಕುಮಾರ್ ರೈ, ಬಿಜೆಪಿಯ ಹಿರಿಯ ಮುಂದಾಳು ಎಸ್. ಅಪ್ಪಯ್ಯ ಮಣಿಯಾಣಿ, ನಗರಸಭಾ ಸದಸ್ಯರಾದ ರಾಜೇಶ್ ಬನ್ನೂರು, ಹರೀಶ್ ನಾಕ್, ಮಹಿಳಾ ಮೋರ್ಚಾದ ಗೌರಿ ಬನ್ನೂರು, ಚಂದ್ರಶೇಖರರಾವ್ ಬಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply