Header Ads
Breaking News

ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಬಿಟ್ಟು ಅಭಿವೃದ್ಧಿಪರ ಚಿಂತನೆ ನಡೆಸಲಿ : ಯು.ಟಿ. ಖಾದರ್ ಹೇಳಿಕೆ

ದೇಶದ ಎಲ್ಲಾ ಪ್ರದೇಶದ ಜನರು ನೆಲೆಸಿರುವ ಪ್ರದೇಶ ದೆಹಲಿಯ ಚುನಾವಣೆಯಲ್ಲಿ ಆಮ್‍ಆದ್ಮಿ ಪಕ್ಷ ಆಡಳಿತಕ್ಕೆ ಬೆಂಬಲ ನೀಡುವ ಮೂಲಕ ಕೇಂದ್ರ ಸರಕಾರದ ವಿರುದ್ಧ ತೀರ್ಮಾನ ನೀಡಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಬಿಟ್ಟು ಅಭಿವೃದ್ಧಿಪರ ಚಿಂತನೆನಡೆಸಲಿ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದರು.

ಮೊಂಟೆಪದವು ಬಳಿ ನಡೆದ ಕಾರ್ಯಕ್ರಮದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ದೆಹಲಿಯ ಚುನಾವಣೆ ಸಂದರ್ಭದಲ್ಲಿ ಆಮ್ ಆದ್ಮಿ ಮತ್ತು ಇತರ ಪಕ್ಷಗಳು ಅಭಿವೃದ್ಧಿಮಂತ್ರ ಜಪಿಸಿದರೆ, ಬಿಜೆಪಿ ಮಾತ್ರ ಕಾಶ್ಮೀರದ 370 ವಿಧಿ, ರಾಮಮಂದಿರ ಸೇರಿದಂತೆ ಬಾವನಾತ್ಮಕ ವಿಚಾರಗಳನ್ನು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಬಳಸಿದರು. ಪಕ್ಷದ ಸಂಸದರು ಭಾಷಣದಲ್ಲಿ ಸಮಾಜ ವಿಭಜನೆ ಮಾಡುವ ಮಾತುಗಳನ್ನಾಡಿದರು. 

ಗ್ಯಾಸ್ ಸಿಲಿಂಡರ್ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಜೀವನ ದುಸ್ತರವಾಗಿದ್ದು ಮುಂದಿನ ದಿನಗಳಲ್ಲಿ ಒಂದು ಸಾವಿರ ದಾಟುವ ಸ್ಥಿತಿ ಇದೆ. ಇದು ಕೇಂದ್ರದಲ್ಲಿ ದೂದೃಷ್ಟಿತ್ವ ಇಲ್ಲದ ಕಾರಣ ನಡೆಯುತ್ತಿದ್ದು ಜನರು ಇದರ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಉಜ್ವಲಯೋಜನೆಯ ಉಚಿತ ಎನ್ನುವ ಪೊಸ್ಟರ್ ಅಂಟಿಸಿ ಇದೀಗ ಬಡವರನ್ನು ಬೆಲೆ ಏರಿಕೆಯ ಮೂಲಕ ದೋಚುವ ಕಾರ್ಯ ನಡೆಯುತ್ತಿದೆ ದೆಹಲಿ ಚುನಾವಣೆ ನಡೆದ ಬಳಿಕ ಏಕಾಏಕಿ ಏರಿಸಿರುವುದು ಖಂಡನೀಯ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *