Header Ads
Header Ads
Breaking News

ಬಿಜೆಪಿ ಮಹಿಳಾ ಮೋರ್ಚಾದಿಂದ ಮನೆ-ಮನ ಅಭಿಯಾನ ಪ್ರತಿ ಮನೆಗೂ ತೆರಳಿ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜಾಗೃತಿ ಜಿಲ್ಲಾ ಬಿಜೆಪಿ ಕಾರ್‍ಯಕಾರಿಣಿ ಸದಸ್ಯೆ ಗುಣವತಿ ಕೊಲ್ಲಂತಡ್ಕ ಹೇಳಿಕೆ

ಸುಳ್ಯ : ಬಿಜೆಪಿ ಸ್ಥಾಪನ ದಿನ ಪ್ರಯುಕ್ತ ಎ.6ರಿಂದ ಎ.12ರ ತನಕ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆಮನೆ ಭೇಟಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಪ್ರತಿ ಮನೆ ಮನೆಗೆ ತೆರಳಿ ಕೇಂದ್ರ ಸರಕಾರದ ಯೋಜನೆಗಳು ಮತ್ತು ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್‍ಯಕಾರಿಣಿ ಸದಸ್ಯೆ ಗುಣವತಿ ಕೊಲ್ಲಂತಡ್ಕ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 228 ಬೂತ್‌ಗಳಲ್ಲಿ ಅಭಿಯಾನ ನಡೆಯಲಿದೆ.ಮಹಿಳೆಯರು ಪ್ರತಿ ಬೂತ್ ಮಟ್ಟದಲ್ಲಿ ಅಭಿಯಾನ ನಡೆಸಲಿದ್ದಾರೆ. ಸಿದ್ಧರಾಮಯ್ಯ ನೇತೃತ್ವದ ಸರಕಾರದ ವೈಪಲ್ಯ. ಅವರ ಅವಧಿಯಲ್ಲಿ ಮಹಿಳೆಯರು ಮತ್ತು ಹಿಂದೂಗಳ ಮೇಲೆ ಆದಂತಹ ಅನ್ಯಾಯಗಳ ಕುರಿತು ತಿಳಿಸಲಾಗುವುದು. ಕೇಂದ್ರದ ಮೋದಿ ಸರಕಾರದ ಜನಪರ ಆಡಳಿತ ಮತ್ತು ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕೈಗೊಂಡ ಕಲ್ಯಾಣ ಯೋಜನೆ ಮತ್ತು ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ಬರುವಂತೆ ಕೇಳಿಕೊಳ್ಳಲಾಗುವುದು. ಬಿಜೆಪಿ ಬೆಂಬಲಿಸಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಲು ಮತದಾರರ ಬೆಂಬಲ ಯಾಚಿಸಲಾಗುವುದು ಎಂದರು.ಬಿಜೆಪಿ ಮಹಿಳಾ ಸಮಾವೇಶ ಈ ಹಿಂದೆ ನಡೆಸಲಾಗಿದೆ. ಈ ಬಾರಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಪಕ್ಷ ಗೆಲ್ಲಿಸಲು ಮಹಿಳಾ ಮೋರ್ಚಾ ಸದಸ್ಯೆಯರು ಕಟಿಬದ್ಧರಾಗಿ ಒಗ್ಗಟ್ಟಿನಿಂದ ಸಾಮೂಹಿಕವಾಗಿ ಕೆಲಸ ಮಾಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ತಾ.ಪಂ ಸದಸ್ಯರಾದ ಪುಷ್ಪಾ ಮೇದಪ್ಪ, ಜಾಹ್ನವಿ ಕಾಂಚೋಡು, ಜಿಲ್ಲಾ ಮಹಿಳಾ ಮೋರ್ಚಾದ ಸದಸ್ಯೆ ಸರೋಜಿನಿ ಪೆಲ್ತಡ್ಕ ಉಪಸ್ಥಿತರಿದ್ದರು.