Header Ads
Header Ads
Breaking News

ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಸುಳ್ಳುಗಾರ, ತಿರುಗೇಟು ನೀಡಿದ ಬೈಂದೂರು ಶಾಸಕ ಗೋಪಾಲ ಪೂಜಾರಿ

ಹೆಮ್ಮಾಡಿಯ ಜನತಾ ಪ್ರೌಢಶಾಲೆಯನ್ನು ಬೈಂದೂರು ಶಾಸಕ ಮಾರಾಟ ಮಾಡಿದ್ದಾರೆಂಬ ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಆರೋಪಕ್ಕೆ ಶಾಸಕ ಗೋಪಾಲ ಪೂಜಾರಿ ತಿರುಗೇಟು ನೀಡಿದ್ದಾರೆ.
ಕುಂದಾಪುರದ ಕಟ್ಟಬೆಳ್ತೂರಿನ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಚುನಾವಣೆ ಸಮೀಪದಲ್ಲಿರುವ ಸಂದರ್ಭ ಎಚ್ಚರಗೊಳ್ಳುವ ಇವರು ಕಾರ್ಯಕರ್ತರನ್ನು ಒಟ್ಟುಗೂಡಿಸಿ, ಗಿಡ ಕೊಡುವ ಕಾರ್ಯಕ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ದೀಪಕ್ ಕುಮಾರ್ ಶೆಟ್ಟಿ ನನ್ನ ವಿರುದ್ಧ ಈ ಜನತಾ ಪ್ರೌಢ ಶಾಲೆಯನ್ನು ೩೦ ಕೋಟಿಗೆ ಮಾರಿದ್ದಾರೆ ಎಂದು ಆರೋಪಿಸಿದ್ದಾರೆ. ಜನತಾ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷನಾಗಿ ನಾನಿದ್ದೇನೆ. ಅನುದಾನಿತ ಶಾಲೆಯಾದರೂ ಕೆಲವು ಶಿಕ್ಷಕರು ಸಿಬ್ಬಂದಿಗಳಿಗೆ ನಮ್ಮ ಸಂಸ್ಥೆಯ ಮುಖಾಂತರ ಚೆಕ್ ಮೂಲಕ ಸಂಬಳ ನೀಡುತ್ತಾ ಬಂದಿದ್ದೇವೆ. ಈ ದೀಪಕ್ ಶೆಟ್ಟಿ ನಮ್ಮ ಕ್ಷೇತ್ರದ ಅಭಿವೃದ್ಧಿ ನೋಡಿ ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಅವರು ಆರೋಪ ಮಾಡುವ ಮೊದಲು ಶಾಲೆಗೆ ಹೋಗಿ ಅಲ್ಲಿ ಮಾಹಿತಿ ತಿಳಿದುಕೊಂಡು ಮಾತನಾಡಬೇಕಾಗಿತ್ತು. ಒಂದು ವೇಳೆ ಅವರು ಹೇಳಿದಂತೆ ಜನತಾ ಪ್ರೌಢ ಶಾಲೆಯನ್ನು ಮಾರಟ ಮಾಡಿದ್ದೇ ಆದಲ್ಲಿ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ಇಲ್ಲವಾದಲ್ಲಿ ಅವರು ರಾಜಕೀಯ ಜೀವನದಿಂದ ಹೊರಬೀಳಬೇಕು ಎಂದು ತಿರುಗೇಟು ನೀಡಿದ್ದಾರೆ.

Related posts

Leave a Reply