Header Ads
Breaking News

ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಪ್ರಕರಣಕ್ಕೆ ಟ್ವಿಸ್ಟ್!: ಅಪಘಾತವಲ್ಲ, ಕೊಲೆ

ಸುಳ್ಯ: ಸಂಪಾಜೆ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿಯವರನ್ನು ಲಾರಿ ಅಪಘಾತದ ಮೂಲಕ ಮಡಿಕೇರಿಯ ಮೇಕೇರಿ ಬಳಿ ಕೊಲೆ ಮಾಡಿದ್ದು, ಕಲ್ಲುಗುಂಡಿ ಮತ್ತು ಸಂಪಾಜೆಯ ಮೂವರು ಆರೋಪಿಗಳನ್ನು ಮಡಿಕೇರಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಕಳೆದ ವಾರ ಮಡಿಕೇರಿ ಬಳಿ ವಾಹನ ಅಪಘಾತದಲ್ಲಿ ಕೊಡಗು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ದುರ್ಮರಣ ಗೀಡಾದ ಘಟನೆಗೆ ಹೊಸತಿರುವು ದೊರೆತ್ತಿದ್ದು, ಇದೊಂದು ಸಹಜ ಅಪಘಾತ ಪ್ರಕರಣವಾಗಿರದೇ, ಲಾರಿ ಅಪಘಾತದ ಮೂಲಕ ಕೊಲೆ ನಡೆಸಿದ್ದ ಕೃತ್ಯ ಎಂದು ಕೊಡಗು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಮರಳು ಸೇರಿದಂತೆ ಅಕ್ರಮ ವ್ಯವಹಾರಗಳಿಗೆ ಬಾಲಚಂದ್ರ ಕಳಗಿಯವರು ತಡೆಯಾಗುತ್ತಿದ್ದಾರೆಂದು, ಅವರನ್ನು ಕೊಲೆ ನಡೆಸಿದ ಸಂಶಯ ಇದೆ ಎಂದು ಕೊಡಗು ಜಿಲ್ಲಾ ಬಿಜೆಪಿ ದೂರಿತ್ತು. ಅಪಘಾತ ನಡೆಸಿದ ಸ್ಥಳ ಕಳಗಿಯವರು ದಿನನಿತ್ಯ ಓಡಾಡುವ ರಸ್ತೆವಲ್ಲದ್ದರಿಂದ ಮನೆಯವರಿಗೂ ಈ ಘಟನೆ ಬಗ್ಗೆ ಸಂಶಯ ಮೂಡಿ, ಕಳಗಿಯವರ ಚಿಕ್ಕಪ್ಪ ಕೂಡ ಪೊಲೀಸ್ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಮೂವರು ಆರೋಪಿಗಳಾದ ಕಲ್ಲುಗುಂಡಿಯ ಸಂಪತ್ ಕುಮಾರ್(38), ಹರಿಪ್ರಸಾದ್(36), ಜಯ(34) ಅವರನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Related posts

Leave a Reply

Your email address will not be published. Required fields are marked *