Header Ads
Breaking News

ಬಿಜೆಪಿ ವತಿಯಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ಶಿಬಿರ : ಶಾಸಕ ಡಾ. ಭರತ್ ಶೆಟ್ಟಿಯವರಿಂದ ಉದ್ಘಾಟನೆ

ಭಾರತೀಯ ಜನತಾ ಪಾರ್ಟಿ ಸ್ಥಾನೀಯ ಸಮಿತಿ ವಾರ್ಡ್ ನಂ 234 ಹಾಗೂ ಓಂ ಶಕ್ತಿ ಫ್ರೆಂಡ್ಸ್ ಕ್ಲಬ್(ರಿ.) ಇದರ ಜಂಟಿ ಸಹಯೋಗದಲ್ಲಿ ನೀರುಮಾರ್ಗ ಗ್ರಾಮ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ ಆಯೋಜಿಸಿದ ಆಯುಷ್ಮಾ ನ್ ಆರೋಗ್ಯ ಕಾರ್ಡ್ ಶಿಬಿರವನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿ ಯಾಗಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾನ್ಯ ಶಾಸಕರು ಆಯುಷ್ಮಾನ್ ಕಾರ್ಡ್ ಇದರ ಉಪಯೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಉದ್ಘಾಟನಾ ಕಾರ್ಯಕ್ರಮ ದ ನಂತರ ನೀರುಮಾರ್ಗ ನಾಲ್ಕು ಬೆಟ್ಟುವಿನಿಂದ ನಾಲ್ಕು ಸತ್ಯಚಾವಡಿಯ ವರೆಗೆ ಸುಮಾರು 15 ಲಕ್ಷ ದ ರಸ್ತೆ ಕಾಮಗಾರಿಗೆ ಡಾ. ವೈ ಭರತ್ ಶೆಟ್ಟಿ ಯವರು ಗುದ್ದಲಿ ಪೂಜೆ ನೆರವೇರಿಸಿದರು. ಮಂಗಳೂರು ಉತ್ತರ ಮಂಡಲ ಇದರ ಅಧ್ಯಕ್ಷ ರಾದ ಶ್ರೀ ತಿಲಕ್ ರಾಜ್, ಮಂಗಳೂರು ಉತ್ತರ ಮಂಡಲ ಇದರ ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ನೀರುಮಾರ್ಗ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾದ ಸಚಿನ್ ಹೆಗ್ಡೆ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಶ್ರೀಮತಿ ಪವಿತ್ರ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *