Header Ads
Breaking News

ಬಿಜೆಪಿ ವೈಫಲ್ಯದಿಂದಲೇ ಉಳ್ಳಾಲದಾದ್ಯಂತ ಹಿಂದೂ ಭಾವನೆಗಳಿಗೆ ಧಕ್ಕೆ : ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಹೇಳಿಕೆ

ಬಿಜೆಪಿ ಸರಕಾರದ ವೈಫಲ್ಯದಿಂದ ದು?ರ್ಮಿಗಳು ದುಷ್ಕೃತ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇರುವಾಗ ಬಿಜೆಪಿ ಹಾಗೂ ಬೆಂಬಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವು ನಾಚಿಕೆಗೇಡಿನ ವಿಚಾರ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಹೇಳಿದ್ರು.

ಉಳ್ಳಾಲದ ಕೊರಗಜ್ಜ -ಗುಳಿಗಜ್ಜ ಕಟ್ಟೆಯಲ್ಲಿ ಮತ್ತು ಕೊಣಾಜೆ ಮುಲಾರದ ಗೋಪಾಲಕೃಷ್ಣ  ಮಂದಿರದಲ್ಲಿ ಹಿಂದೂ ದೈವ -ದೇವರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಘಟನೆಯನ್ನು ಖಂಡಿಸಿ ಮತ್ತು ಆರೋಪಿಗಳನ್ನು ಶೀಘ್ರವೇ ಪೊಲೀಸ್ ಇಲಾಖೆ ಬಂಧಿಸುವಂತೆ  ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಉಳ್ಳಾಲ ಪುರಸಭೆ ಮಾಜಿ ಸದಸ್ಯ ದಿನೇಶ್ ರೈ ಮಾತನಾಡಿ, ಯು.ಟಿ ಖಾದರ್ ಅವರನ್ನು ಸೋಲಿಸಲೆಂದೇ ಮಂಗಳೂರು ಕ್ಷೇತ್ರದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಲಾಗುತ್ತಿದೆ. ಒಂದು ತಿಂಗಳಿನಿಂದ ಕೃತ್ಯಗಳು ನಡೆಯುತ್ತಿದ್ದರೂ, ವಿ.ಹಿಂ. ಪ-ಬಜರಂಗದಳ ಸತ್ತುಹೋಗಿತ್ತೇ? ಹಿಂದೂ ಹೆಸರಿನಲ್ಲಿ ಮತ ಪಡೆಯುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕಿದೆ ಎಂದರು.


ಈ ವೇಳೆ ಇಂಟಕ್ ಮುಖಂಡ ದಿನಕರ್ ಶೆಟ್ಟಿ ತಾ.ಪಂ ಅಧ್ಯಕ್ಷ ಮೋನು ಮಲಾರ್, ಸದಸ್ಯೆ ಸುರೇಖಾ ಚಂದ್ರಹಾಸ್, ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಪಾಧ್ಯಕ್ಷ ಐಯೂಬ್ ಮಂಚಿಲ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಕೋಡಿಜಾಲ್, ರಮೇಶ್ ಬೋಳಿಯಾರ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *