Header Ads
Breaking News

ಬಿಜೆಪಿ ಶಾಸಕರಿಗೆ ಮನೆ ವಿತರಿಸಲು ಯಾಕೆ ಸಾಧ್ಯವಾಗಿಲ್ಲ : ಮಾಜಿ ಎಮ್‍ಎಲ್‍ಸಿ ಐವನ್ ಡಿಸೋಜಾ ಪ್ರಶ್ನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿರಹಿತರಿಗೆ ವಸತಿ ಯೋಜನೆಯ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಸುಮಾರು 916 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದ್ದು, ಆದರೆ ಎರಡೂವರೆ ವರ್ಷವಾದ್ರೂ ಇದುವರೆಗೆ ಮನೆ ವಿತರಿಸುವ ಕಾರ್ಯ ನಡೆದಿಲ್ಲ ಎಂದು ಮಾಜಿ ಎಮ್‍ಎಲ್‍ಸಿ ಐವನ್ ಡಿಸೋಜಾ ಹೇಳಿದರು.

ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವಸತಿ ಯೋಜನೆಯು ಸುಮಾರು 30 ಕೋಟಿ ರೂಪಾಯಿ ಯೋಜನೆಯಾಗಿದ್ದು, ಒಂದು ಮನೆಗೆ 5 ಲಕ್ಷ ರೂಪಾಯಿಯಂತೆ ತೀರ್ಮಾನ ಮಾಡಲಾಗಿತ್ತು. ಎರಡು ವರ್ಷ 8 ತಿಂಗಳ ಕಾಲ ವಸತಿರಹಿತರಿಗೆ ಮನೆ ನೀಡಲು ಪ್ರಸ್ತುತ ಶಾಸಕರಿಗೆ ಯಾಕೆ ಸಾಧ್ಯ ಆಗಿಲ್ಲ ಎಂದು ಪ್ರಶ್ನಿಸಿದರು. ಫಲಾನುಭವಿಗಳನ್ನು ಆಯ್ಕೆ ಮಾಡಿ ಕರೆಸಿ ಹಕ್ಕುಪತ್ರಗಳನ್ನು ನೀಡಿ, ಇದೀಗ ಎರಡೂವರೆ ವರ್ಷ ಆದ್ರೂ ಮನೆ ಕೊಡಲು ಮುಂದಾಗದೇ ಇರುವುದರಿಂದ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದು ಬಿಜೆಪಿ ಶಾಸಕರುಗಳ ಅಸಡ್ಡೆಯಿಂದ ಆಗಿದೆ ಎಂದು ಆರೋಪಿಸಿದರು.ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಅಬ್ದುಲ್ ರವೂಪ್ ಮತ್ತಿತರರು ಹಾಜರಿದ್ದರು.

Related posts

Leave a Reply

Your email address will not be published. Required fields are marked *