Header Ads
Header Ads
Header Ads
Breaking News

ಬಿಜೆಪಿ, ಸಂಘಪರಿವಾರ ಕಾರ್ಯಕರ್ತರ ಮೇಲೆ ಹತ್ಯೆ ಪ್ರಕರಣ ಸಿಬಿ‌ಐಗೆ ಹಸ್ತಾಂತರಿಸುವಂತೆ ಆಗ್ರಹ

 

ಹಿಂದೂಗಳ ಮೇಲಾಗಿರುವ ಎಲ್ಲಾ ಹತ್ಯೆ, ಹಲ್ಲೆ ಪ್ರಕರಣಗಳನ್ನು ಸಿಬಿ‌ಐಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿ ಸೆ.7ರಂದು ರಾಜ್ಯದ 5 ಭಾಗಗಳಿಂದ ಮಂಗಳೂರು ಚಲೋ ಬೈಕ್ ರ್‍ಯಾಲಿ ನಡೆಯಲಿದೆ ಎಂದು ದ.ಕ .ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ಹೇಳಿದ್ದಾರೆ.

ಈ ಕುರಿತು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ಸಂಘ ಪರಿವಾರ ಕಾರ್ಯಕರ್ತರ ಹತ್ಯೆಯಲ್ಲಿ ಪಿ‌ಎಫ್‌ಐ , ಎಸ್ ಡಿಪಿ‌ಐ , ಕೆ‌ಎಫ್.ಡಿ ಕೈವಾಡ ಹಿನ್ನೆಲೆಯಲ್ಲಿ ಈ ಸಂಘಟನೆ, ಪಕ್ಷವನ್ನು ನಿಷೇಧಿಸಬೇಕು. ಈ ಹಿನ್ನೆಲೆಯಲ್ಲಿ ಸೆ.೪ರಂದು ಜಿಲ್ಲೆಯ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿಭಟನೆ ಸಭೆ ನಡೆಯಲಿದ್ದು, ಆ ಮೂಲಕ ಸ್ಥಳೀಯ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತದೆ. ಸೆ.೬ರಂದು ರಾಜ್ಯದ ೫ ವಿಭಾಗಗಳಿಂದ ಮಂಗಳೂರು ಚಲೋ ಬೈಕ್ ರ್‍ಯಾಲಿ ನಡೆಸಲಾಗುತ್ತದೆ ಅಂತಾ ಹೇಳಿದ್ರು.
ವರದಿ: ನಾಗೇಶ್ ಕಾವೂರು ಮಂಗಳೂರು

Related posts

Leave a Reply