Header Ads
Breaking News

ಬಿಜೆಪಿ ಸಂಸದರ ವಿರುದ್ಧ ರಮಾನಾಥ್ ರೈ ವಾಗ್ದಾಳಿ: ಸುಳ್ಯದಲ್ಲಿ ಹೇಳಿದ್ದೇನು ಗೊತ್ತೇ?

ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಸಂಸದರು ಜಿಲ್ಲೆಯಲ್ಲಿ ಇದ್ದಾರೆ. ಬಿಜೆಪಿಯ ಯಾವ ಸಂಸದರೂ ಕೂಡ ಜಿಲ್ಲೆಗೆ ಹೊಸ ಯೋಜನೆಗಳನ್ನಿ ಇಲ್ಲಿಯವರೆಗೆ ತಂದಿಲ್ಲ. ದಕ್ಷಿಣಕನ್ನಡಕ್ಕೆ ಬಿಜೆಪಿ ಸಂಸದರ ಕೊಡುಗೆ ಶೂನ್ಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಕಳೆದ10 ವರ್ಷಗಳಿಂದ ನಳಿನ್ ಕುಮಾರ್ ಕಟೀಲ್ ಸಂಸದರಾಗಿ ಇದ್ದಾರೆ. ಅವರೊಬ್ಬ ಕಳಪೆ ಸಂಸದ ಈ ಮಾತನ್ನು ನಾನು ಹೇಳುತ್ತಿಲ್ಲ. ಬದಲಾಗಿ ಬಿಜೆಪಿ ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ. ಮೋದಿಗಾಗಿ ಮತ ಕೇಳುತ್ತಿದ್ದರೆ. ಮೋದಿಗೆ ನಮ್ಮ ಜಿಲ್ಲೆಯವರು ಏಕೆ ಮತ ಕೊಡಬೇಕು. ನಮ್ಮ ಜಿಲ್ಲೆಗೆ ಮೋದಿಯವರು ಏನು? ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು ಜಿಲ್ಲೆಯಲ್ಲಿನ ಅಭಿವೃದ್ದಿ ಯೋಜನೆಗಳು ನೆನೆಗುದಿಗೆ ಬಿದ್ದಿದೆ, ಪಂಪುವೆಲ್ ಪ್ಲೈಒವರ್ ಕಾಮಗಾರಿ ಅರ್ಧದಲ್ಲಿದೆ. ಗುಂಡ್ಯ-ಬಂಟ್ವಾಳ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿದೆ. ಇಂತಹ ಕೆಲಸಗಳಿಗೆ ಮೋದಿಗೆ ಓಟು ಹಾಕಬೇಕಾ? ಇಂತಹ ಕೆಲಸಗಳನ್ನು ಮಾಡದ ಸಂಸದರು ನಮಗೆ ಬೇಕಾ? ಎಂದು ಹೇಳಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ. ವೆಂಕಪ್ಪ ಗೌಡ, ಟಿ.ಎಂ. ಶಹೀದ್, ಕಾಂಗ್ರೆಸ್ ಮುಖಂಡರಾದ ಡಾ. ರಘು, ಪಿ.ಪಿ. ವರ್ಗೀಸ್, ಎಸ್. ಸಂಶುದ್ದೀನ್, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *