
ರಾಜ್ಯದಲ್ಲಿಯೂ ಸಿದ್ದರಾಮಯ್ಯ ಆಡಳಿತದಲ್ಲಿ ಹಲವು ಯೋಜನೆಗಳ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು. ಆದರೆ ಬಿಜೆಪಿ ಸರ್ಕಾರ ಅಚ್ಚೇ ದಿನ್ ಎಂದು ಜನರನ್ನು ಬೀದಿಗೆ ತಂದು ನಿಲ್ಲಿಸಿದೆ ಸಾಲ ಮಾಡಿ ಬಜೆಟ್ ಮಂಡಿಸುವುದು ಬಿಜೆಪಿಯ ಹೊಸ ಇತಿಹಾಸ. ಬೆಲೆ ಏರಿಕೆಯಿಂದ ಜನತೆ ತತ್ತರಿಸಿಕೊಂಡಿದ್ದಾರೆ. ರಾಜ್ಯ ಬಜೆಟ್ನಿಂದ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾನು ಶಾಸಕನಾಗಿದ್ದಾಗ ಕೆಂಜಾರು ಗೋಶಾಲೆ ನೆಲಸಮ ಮಾಡಿಲ್ಲ. ಅಕ್ರಮ ಒತ್ತುವರಿ ಗಮನಕ್ಕೆ ಬಂದಿದ್ದರೂ ಗೋವುಗಳಿಗಾಗಿ ಸುಮ್ಮನಿದ್ದೆ. ಈಗ ಬಿಜೆಪಿಯೇ ಗೋವುಗಳು ಬೀದಿಗೆ ಬಿಟ್ಟಿದೆ. ಎಲ್ಲಿ ಗೋ ಉತ್ಪನ್ನಗಳ ಅವಶ್ಯಕತೆ ಇದೆಯೋ ಅಲ್ಲಿ ಗೋ ಶಾಲೆ ನಿರ್ಮಿಸಬೇಕೆಂದರು. ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಸಂಪತ್ ಸಾಮ್ರಾಜ್ಯ ಉಪಸ್ಥಿತರರಿದ್ದರು.