Header Ads
Breaking News

ಬಿಡುವಿನ ವೇಳೆ ಮಾಸ್ಕ್ ತಯಾರಿಸಿ ವಿತರಣೆ : ಅಂಗನವಾಡಿ ಕಾರ್ಯಕರ್ತೆಯಿಂದ ವಿನೂತನ ಸೇವೆ

ಬಂಟ್ವಾಳ ತಾಲೂಕಿನ ಮೂರು ಮಂದಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೆಲಸದ ಬಿಡುವಿನ ವೇಳೆಯಲ್ಲಿ ಐನ್ನೂರಕ್ಕಿಂತಲೂ ಅಧಿಕ ಮಾಸ್ಕ್‍ಗಳನ್ನು ತಯಾರಿಸಿ ಗುರುವಾರ ಬೆಳಿಗ್ಗೆ ಸಜೀಪಮೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರ್ನಬೈಲು, ಪಣೋಲುಬೈಲು ಹಾಗೂ ಪುರಸಭೆ ವ್ಯಾಪ್ತಿಯ ಮೆಲ್ಕಾರ್‍ನಲ್ಲಿ ಮಾಸ್ಕ್ ಇಲ್ಲದೆ ವಾಹನದಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ಉಚಿತವಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಸಜೀಪಮೂಡ ಗ್ರಾಮದ ನಗ್ರಿ, ಪಣೋಲಿಬೈಲು ಹಾಗೂ ಮೆಲ್ಕಾರ್‍ನ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಾದ ವಿನಯ, ವಿಜಯ ಹಾಗೂ ವೀಣಾ ಎಂಬವರು ತಮ್ಮ ಕೆಲಸದ ಬಿಡುವಿನ ವೇಳೆಯಲ್ಲಿ ಕೋವಿಡ್‍ನಿಂದ ರಕ್ಷಿಸಿಕೊಳ್ಳಲು ಮುಖಕವಚಗಳನ್ನು ಸಿದ್ದಪಡಿಸಿದ್ದಾರೆ. ಮೂರು ಮಂದಿ ಸೇರಿ ಐನ್ನೂರಕ್ಕಿಂತಲೂ ಅಧಿಕ ಮಾಸ್ಕ್‍ಗಳನ್ನು ಸಿದ್ದಪಡಿಸಿ ಸಾರ್ವಜನಿಕರಿಗೆ ನೀಡಲು ತೀರ್ಮಾನಿಸಿದ್ದು ಅಂಗನವಾಡಿ ಕಾರ್ಯಕರ್ತೆಯರ ಈ ಸಮಾಜಮುಖಿ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕೈ ಜೋಡಿಸಿದ್ದು ಸಜೀಪಮೂಡ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನೀಡಿ ಪ್ರತಿದಿನ ಮಾಸ್ಕ್ ಧರಿಸುವಂತೆ ಪ್ರೇರೆಪಿಸಲಾಯಿತು. ಈ ಸಂದರ್ಭ ಸಿಡಿಪಿಓ ಹಿರಿಯ ಮೇಲ್ವಿಚಾರಕರಾದ ಗಾಯಾತ್ರಿ ಕಂಬಳಿ, ಭಾರತಿ ಕುಂದರ್, ಸಜೀಪಮೂಡ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ಪಿಡಿಓ ನಿರ್ಮಲ, ಸಿಬ್ಬಂದಿ ಭವಾನಿ, ಆಶಾಕಾರ್ಯಕತೇಯರು ಹಾಗೂ ಅಂಗನವಾಡಿಕಾರ್ಯಕರ್ತೆಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರ ಸಮಾಜಮುಖಿ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

Related posts

Leave a Reply

Your email address will not be published. Required fields are marked *