Header Ads
Header Ads
Breaking News

ಬಿರುವೆರ್ ಕುಡ್ಲ ಮಹಿಳಾ ಘಟಕ, ಮಂಗಳೂರಿನಲ್ಲಿ ಸಭೆ ಅಯೋಜನೆ


ಫ್ರೆಂಡ್ಸ್ ಬಲ್ಲಾಲ್, ಬಿರುವೆರ್ ಕುಡ್ಲ ಮಹಿಳಾ ಘಟಕದ ಪೂರ್ವಭಾವಿ ಸಭೆಯು ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.
ಬಿರುವೆರ್ ಕುಡ್ಲ ಮಹಿಳಾ ಘಟಕ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಮಂಗಳೂರು ಸದರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ವೇದವ್ಯಾಸ್ ಕಾಮತ್ ಮಾತನಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಬಿರುವೆರ್ ಕುಡ್ಲ ಮಹಿಳಾ ಸಂಘಟನೆಯವರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದಾರೆ. ಇನ್ನು ಮುಂದೆಯು ಈ ಘಟಕ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಮಾಜದ ಸೇವೆಯನ್ನು ಮಾಡಲಿ ಎಂದು ಹಾರೈಸಿದರು. ಅನಂತರ ರೋಶನಿ ನಿಲಯದ ಪ್ರಾಧ್ಯಾಪಕರಾದ ಶ್ರೀಮತಿ ವಿನಿತಾ ರೈ ಮತ್ತು ರೋಶನಿ ನಿಲಯದ ಸಹಾಯಕ ಪ್ರಾಧ್ಯಾಪಕರಾದ ಅನುರಾಧ ಶೆಟ್ಟಿ, ಸಮಾಜಕ್ಕೆ ಮಹಿಳೆಯರ ಕೊಡುಗೆ ಏನು ಮತ್ತು ಸಂಘಟನೆಯನ್ನು ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಒಂದು ಮಗುವಿಗೆ ಸಾಹಾಯಧನ ವಿತರಿಸಿದರು. ಈ ಸಂದರ್ಭ ಉದ್ಯಮಿ ಸದಾನಂದ ಪೂಜಾರಿ, ಸಮಾಜ ಸೇವಕಿ ವಿದ್ಯಾ ರಾಕೇಶ್ ಉಪಸ್ಥಿತರಿದ್ದರು.

Related posts

Leave a Reply