Header Ads
Header Ads
Header Ads
Breaking News

ಬಿರುವೆರ್ ಕುಡ್ಲ ವತಿಯಿಂದ ಹುಲಿ ವೇಷ ಊದು ಪೂಜಾ ಸಚಿವ ಖಾದರ್, ಮೇಯರ್ ಕವಿತಾ ಸನಿಲ್ ಸೇರಿದಂತೆ ವಿವಿಧ ಗಣ್ಯರು ಭಾಗಿ

ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ ವತಿಯಿಂದ ಹುಲಿ ವೇಷ ಊದೂಪೂಜಾ ಕಾರ್ಯಕ್ರಮ ಜರುಗಿತ್ತು. ನಗರದ ಬಳ್ಳಾಲ್ ಭಾಗ್‌ನಲ್ಲಿರುವ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್, ಮೇಯರ್ ಕವಿತಾ ಸನಿಲ್, ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಸೇರಿದಂತೆ ಮತ್ತಿತರು ಭಾಗಿಯಾಗಿದ್ದರು. ಇನ್ನೂ ಸಚಿವ ಯು.ಟಿ.ಖಾದರ್ ಮಾತನಾಡಿ, ಇಂದಿನ ಪೀಳಿಗೆ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವನ್ನು ಬಿರುವೆರ್ ಕುಡ್ಲ ಮಾಡ್ತಾ ಇದೆ.

ಇದೀಗ ಯುವಕರ ಸಂಘಟನೆ ಮೂಲಕ ಸಮಾಜ ಮುಖಿ ಕೆಲಸ ಮಾಡುತ್ತಿರುವುದು ಶಾಘ್ಲನೀಯ ಅಂತಾ ಹೇಳಿದರು.ಇನ್ನು ಮೇಯರ್ ಕವಿತಾ ಸನಿಲ್ ಮಾತನಾಡಿ, ಹುಲಿವೇಷದ ಕುಣಿತದ ಸಮಯದಲ್ಲಿ ಸಂಗ್ರಹವಾದ ಹಣವನ್ನು ಸಮಸ್ಯೆಯಿಂದ ಬಳಲುತ್ತಿರುವರಿಗೆ ಸಹಾಯಹಸ್ತ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅವರು ಹೇಳಿದರು.

Related posts

Leave a Reply