Header Ads
Breaking News

ಬಿಲ್ಲವರ ಆಕ್ರೋಶಕ್ಕೆ ಕಾರಣವಾದ ನಾರಾಯಣಗುರುಗಳ ಆಚರಣೆ

ಉಡುಪಿ ಜಿಲ್ಲಾಡಳಿತದ ವತಿಯಿಂದ ಕಟಪಾಡಿಯ ವಿಶ್ವನಾಥ ಕ್ಷೇತ್ರದಲ್ಲಿ ನಾರಾಯಣಗುರುಗಳ ಜಯಂತಿ ಆಚರಣೆ ನಡೆದಿದ್ದು ಈ ಕಾರ್ಯಕ್ರಮ ಇದೀಗ ಬಿಲ್ಲವರ ಆಕ್ರೋಶಕ್ಕೆ ಕಾರಣವಾಗಿದೆ. ನಾರಾಯಣ ಗುರುಗಳ 165ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಟ್ಟರೆ ಜಿಲ್ಲೆಯ ಯಾವೊಬ್ಬ ಶಾಸಕರಾಗಲೀ, ಜಿ.ಪಂ ಅದ್ಯಕ್ಷರಾಗಲೀ, ಜನಪ್ರತಿನಿಧಿಗಳು ಭಾಗವಹಿಸಲಿಲ್ಲ. ಮಾತ್ರವಲ್ಲದೇ ಸಂಸದೆ ಕೂಡಾ ಗೈರು ಹಾಜರಾಗಿದ್ದರು. ಇದು ಬಿಲ್ಲವರ ಆಕ್ರೋಶಕ್ಕೆ ಕಾರಣವಾಗಿದ್ದು ಬರೇ ಚುನಾವಣೆಯ ಸಂದರ್ಬದಲ್ಲಿ ವೋಟ್‍ಬ್ಯಾಂಕ್‍ಗೋಸ್ಕರ ಬಿಲ್ಲವರನ್ನು ಓಲೈಕೆ ಮಾಡುತ್ತಿರುವ ಜನಪ್ರತಿನಿಧಿಗಳು ನಾರಾಯಣ ಗುರು ಜಯಂತಿಗೆ ಗೈರು ಹಾಜಾರಾಗುವ ಮೂಲಕ ಜಯಂತಿಗೆ ಹಾಗೂ ಬಿಲ್ಲವ ಸಮಾಜಕ್ಕೆ ಮಾಡಿದ ಅವಮಾನ ಎಂದು ಬಿಲ್ಲವರ ಪರಿಷತ್ತು ಉಡುಪಿ ಜಿಲ್ಲಾ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾದ್ಯಕ್ಷ ನವೀನ್ ಅಮೀನ್ ಸಜ್ಜನ ರಾಜಕಾರಣಿಯಾಗಿರುವ ಶ್ರೀನಿವಾಸ ಪೂಜಾರಿ ಅವರು ಸಚಿವರಾಗೋದು ಬೇಡ ಎಂದು ಜಿಲ್ಲೆಯ ಕೆಲ ಶಾಸಕರು ಸಹಿ ಹಾಕಿ ಮುಖ್ಯಮಂತ್ರಿಗಳಿಗೆ ನೀಡಿರೋದು ಖಂಡನಾರ್ಹವಾಗಿದ್ದು ಮುಂದೆ ಇಂತಹ ಮನೋಭಾವನೆ ತೋರಿದರೆ ಪ್ರತಿಭಟನೆ ಮಾತ್ರವಲ್ಲದೇ ಮತ ಬಹಿಷ್ಕಾರಕ್ಕೂ ಸಮಾಜ ಹಿಂದೆ ಬೀಲಲ್ಲ ಎಂದು ಎಚ್ಚರಿಸಿದರು.

Related posts

Leave a Reply

Your email address will not be published. Required fields are marked *