Header Ads
Header Ads
Breaking News

ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣಕ್ಕೆ ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದಿಂದ ಶುದ್ಧನೀರಿನ ಘಟಕ ಕೊಡುಗೆ

ಬಂಟ್ವಾಳ: ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಇದರ ಮಹಿಳಾ ಸಮಿತಿಯ ವತಿಯಿಂದ ಅಧ್ಯಕ್ಷೆ ಜಯಲಕ್ಷ್ಮಿ ಭುವನೇಶ್ ಅವರ ನೇತೃತ್ವದಲ್ಲಿ ಸಮಿತಿಯ ಸದಸ್ಯರು ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣಕ್ಕೆ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್ ವಿ4 ನ್ಯೂಸ್‌ನೊಂದಿಗೆ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಸಭಾಂಗಣದಲ್ಲಿ ಮದುವೆ ಮತ್ತಿತರ ಶುಭಸಮಾರಂಭಗಳು, ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತಯಿಂತಹ ಸಂದರ್ಭದಲ್ಲಿ ಜನರ ಉಪಯೋಗವನ್ನು ಮನಗಂಡು ಶುದ್ದ ಕುಡಿಯುವ ನೀರಿನ ಯಂತ್ರವನ್ನು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ ಘಟಕ ಕೊಡುಗೆಯಾಗಿ ನೀಡಿದೆ ಎಂದರು.

ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ವಿಶ್ವನಾತ ಬಿ., ಸಂಜೀವ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ ಭುವನೇಶ್, ಉಪಾಧ್ಯಕ್ಷೆ ರಮಣಿ ಮೋಹನ್, ಕಾರ್ಯದರ್ಶಿ ಚಂದ್ರಾವತಿ ಕುಶಲ್‌ರಾಜ್, ಜೊತೆ ಕಾರ್ಯದರ್ಶಿ ಅಮಿತಾ ವಿಶ್ವನಾಥ್, ಮಾಜಿ ಅಧ್ಯಕ್ಷೆ ಮಾಲತಿ ಎಸ್, ಪೂಜಾರಿ ಶುಭಾ ಇಂದಿರೇಶ್ ಮತ್ತಿತರರು ಹಾಜರಿದ್ದರು.

Related posts

Leave a Reply