Breaking News

ಬಿಳಿನೆಲೆ ಚೇರು ಪರಿಸರದಲ್ಲಿ ಒಂಟಿ ಸಲಗ ದಾಳಿ, ತೋಟಕ್ಕೆ ನುಗ್ಗಿದ ಕಾಡಾನೆಯಿಂದ ಕೃಷಿ ನಾಶ

ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ಗ್ರಾಮ ಪಂಚಾಯತ್‌ನ ಚೇರು ಪರಿಸರದಲ್ಲಿ ತೋಟಕ್ಕೆ ಕಾಡಾನೆ ಲಗ್ಗೆಯಿಟ್ಟು ಕೃಷಿ ಸೊತ್ತುಗಳನ್ನು ನಾಶಗೊಳಿಸಿದೆ.
ತಡರಾತ್ರಿ ಒಚಿಟಿ ಸಲಗ ದಾಳಿ ನಡೆಸಿದಾಗ ಎಚ್ಚೆತ್ತ ಕೃಷಿಕರು ಸಿಡಿಮದ್ದು ಸಿಡಿಸಿ ಓಡಿಸುವ ಪ್ರಯತ್ನ ನಡೆಸಿದರು. ಈ ವೇಳೆಗಾಗಲೇ ಗೋಪಾಳಿಯ ಪುರುಷೋತ್ತಮ ಭಟ್, ಕುಮಾರ ಗೌಡ ಎಂಬವರ ತೋಟದಲ್ಲಿ ಸಾಕಷ್ಟು ಬಾಳೆಗಿಡಗಳನ್ನು ತುಳಿದು ನಾಶ ಮಾಡಿದೆ. ಪಕ್ಕದ ಸರಸ್ವತಿ ಎಂಬವರ ತೋಟಕ್ಕೂ ದಾಳಿಯಿಟ್ಟ ಒಚಿಟಿ ಸಲಗ ಬಾಳೆ ಹಾಗೂ ತೆಂಗಿನ ಮರವೊಂದನ್ನು ನೆಲಸಮಗೊಳಿಸಿದೆ.
ಇದೇ ಪರಿಸರದಲ್ಲಿ ಅರಣ್ಯ ಇಲಾಖೆ ಆನೆ ಕಂದಕವನ್ನು ನಿರ್ಮಿಸಿದ್ದರೂ ಸಲಗ ಇದೇ ಕಂದಕ ಹಾದು ತೋಟಕ್ಕೆ ಲಗ್ಗೆಯಿಟ್ಟಿದೆ. ಕಾಡಾನೆಗಳು ಬಾಗಿಮಲೆ ಮೀಸಲು ಅರಣ್ಯ ಭಾಗದಿಂದ ಇಳಿದುಬರುತ್ತಿವೆ. ಪ್ರಸಕ್ತ ವರ್ಷದಲ್ಲಿ ಇದು ೩ನೇ ಬಾರಿ ತೋಟಕ್ಕೆ ಲಗ್ಗೆ ಇಟ್ಟಿದ್ದು, ಈ ಹಿಂದೆ ಸಾಕಷ್ಟು ತೆಂಗಿನ ಗಿಡಗಳ ಸಹಿತ ಕೃಷಿ ಸೊತ್ತುಗಳನ್ನು ಹಾನಿಗೊಳಿಸಿದೆ.

Related posts

Leave a Reply