Header Ads
Header Ads
Header Ads
Breaking News

ಬಿಸಿರೋಡಿನಲ್ಲಿ ಡಿ.16 ರಂದು ಡಾ.ಏರ್ಯ ಸಾಹಿತ್ಯ ಸಂಭ್ರಮ ಸಾಹಿತ್ಯ ಸಂಭ್ರಮದ ಪ್ರಯುಕ್ತ ಕಾರ್ಯಾಲಯ ಉದ್ಘಾಟನೆ

ಬಿ.ಸಿ.ರೋಡಿನಲ್ಲಿ ಡಿಸೆಂಬರ್ 16 ರಂದು ನಡೆಯಲಿರುವ ಡಾ. ಏರ್ಯ ಸಾಹಿತ್ಯ ಸಂಭ್ರಮ ಪ್ರಯುಕ್ತ ಬಿ.ಸಿ.ರೋಡ್‌ನಲ್ಲಿ ಕಾರ್ಯಾಲಯವನ್ನು ಉದ್ಘಾಟನೆಗೊಂಡಿತು. ಇನ್ನೂ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ.ತುಕಾರಾಮ ಪೂಜಾರಿ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಅವರು, ಬಿ.ಸಿ.ರೋಡ್ ಸಹಿತ ಬಂಟ್ವಾಳ ಪರಿಸರದ ಜನರ ಮನೋಭಾವನೆ ಸಾಹಿತ್ಯ, ಸಾಂಸ್ಕೃತಿಕ ನೆಲೆಯಲ್ಲಿ ಬದಲಾಗಬೇಕಾಗಿದೆ. ನಮ್ಮ ತಾಲೂಕು ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಅದನ್ನು ನೆನಪಿಸುವ ಕಾರ್ಯ ಆಗಬೇಕೆಂದರು.ಈ ವೇಳೆ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಸಂಘಟಕ ಲೋಕನಾಥ ಶೆಟ್ಟಿ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ ಪೂಂಜ ಮತ್ತಿತರು ಉಪಸ್ಥತಿರಿದ್ರು.

Related posts

Leave a Reply