Header Ads
Header Ads
Breaking News

ಬಿಸಿರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ವಿಳಂಬಕ್ಕೆ ರಾಜ್ಯ ಸರ್ಕಾರ ಹೊಣೆಯಲ್ಲ:ರಮಾನಾಥ ರೈ ಹೇಳಿಕೆ

 

ಸ್ಥಗಿತವಾಗಿರುವ ಬಿಸಿರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯನ್ನು ವೇಗವಾಗಿ ಮುಂದುವರಿಸಿ ಹೊಸದಾಗಿ ಮತ್ತೆ ಟೆಂಡರ್ ಕರೆದು ಸಂಸದ ನಳಿನ್ ಕುಮಾರ್ ಕಟೀಲ್ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಇವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮತ್ತು ಪಂಪ್ವೆಲ್ ಫ್ಲೈ ಓವರ್ ಕೆಲಸ ನಿಧಾನವಾಗುತ್ತಿದೆ. ಗುತ್ತಿಗೆದಾರರಿಗೆ ಬಿಲ್ ಪೇಮೆಂಟ್ ಕೂಡ ಬಾಕಿಯಾಗಿದೆ ಇದಕ್ಕೆ ರಾಜ್ಯ ಸರ್ಕಾರ ವನ್ನು ಹೊಣೆಗಾರಿಕೆ ಮಾಡುವುದು ಸರಿಯಲ್ಲ
ರಾಷ್ಟ್ರೀಯ ಹೆದ್ದರಿ ಪ್ರಾಧಿಕಾರ ಎಲ್ಲಾ ಕಾಮಗಾರಿಯನ್ನು ಆದಷ್ಟು ಪೂರ್ಣಗೊಳಿಸಬೇಕು
ಎಂದು ಹೇಳಿದರು.

Related posts

Leave a Reply