Header Ads
Header Ads
Header Ads
Breaking News

ಬಿಸಿರೋಡ್ ಸರ್ವಿಸ್ ರಸ್ತೆಗೆ ಕಾಂಕ್ರೀಟ್ ಭಾಗ್ಯ ಸರ್ವಋತು ರಸ್ತೆಯಾಗಿ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ

ಬಂಟ್ವಾಳ: ಹೊಂಡಗಳಿಂದಾಗಿ ಕುಖ್ಯಾತಿ ಪಡೆದಿದ್ದ, ವಾಹನ ಚಾಲಕರು ಹಾಗೂ ಪ್ರಯಾಣಿಕರ ಟೀಕೆಗೆ ಗುರಿಯಾಗಿದ್ದ ಬಿ.ಸಿ.ರೋಡಿನ ಸರ್ವಿಸ್ ರಸ್ತೆಗೆ ಕೊನೆಗೂ ಕಾಂಕ್ರೀಟ್ ಭಾಗ್ಯ ಒದಗಿ ಬಂದಿದೆ. ಮಳೆಗಾಲದಲ್ಲಿ ಪ್ರಯಾಣಿಕರನ್ನು ಸಾಕಷ್ಟು ಸತಾಯಿಸಿದ್ದ ಸರ್ವಿಸ್ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಅಭಿವೃದ್ದಿ ಪಡಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.ಮಂಗಳವಾರದಿಂದ ಸರ್ವಿಸ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಿ ಹಿಟಾಚಿ ಮೂಲಕ ಅಗೆಯುವ ಹಾಗೂ ಸಮತಟ್ಟುಗೊಳಿಸುವ ಕಾರ್ಯ ಆರಂಭಗೊಂಡಿದೆ.
ಸರ್ವಿಸ್ ರಸ್ತೆಯ ಅಭಿವೃದ್ದಿ ಕಾಮಗಾರಿಯ ಹಿನ್ನಲೆಯಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಗೊಳಿಸಿರುವುದರಿಂದ ಬಿ.ಸಿ.ರೋಡಿಗೆ ಬರುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮಂಗಳೂರಿಗೆ ತೆರಳುವ ಬಸ್ಸುಗಳು ಮೇಲ್ಸೆತುವೆಯ ಮೂಲಕವೇ ಸಂಚರಿಸಬೇಕಾಗಿರುವುದರಿಂದ ಪ್ರಯಾಣಿಕರನ್ನು ಮೇಲ್ಸೆತುವೆಯ ಮೇಲೆ ಹತ್ತಿಸಿ, ಇಳಿಸಿಕೊಳ್ಳಬೇಕಾಗಿದೆ. ಗ್ರಾಮೀಣ ಭಾಗದಿಂದ ಬಿ.ಸಿ.ರೋಡಿಗೆ ಬರುವ ಬಸ್ಸುಗಳು ಮೇಲ್ಸೆತುವೆಯ ಮೂಲಕ ಹೋಗಿ ಸುತ್ತು ಬಳಸಿ ಬಸ್ಸು ನಿಲ್ದಾಣಕ್ಕೆ ಬರಬೇಕಾಗಿದೆ. ಇದರಿಂದಾಗಿ ಒಂದು ಹಂತದ ಕಾಮಗಾರಿ ಪೂರ್ಣಗೊಳ್ಳುವವರೆಗೆ ಮೇಲ್ಸೆತುವ ಬಳಿ ಇಳಿಯುವ ಪ್ರಯಾಣಿಕರು ನಗರಕ್ಕೆ ಬರಬೇಕಾದರೆ ನಡೆದು ಬರಬೇಕಾಗಿದೆ. ಬೆಳಗ್ಗಿನ ವೇಳೆ ಶಾಲೆ ಕಾಲೇಜಿನ ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವವರು ತೊಂದರೆ ಅನುಭವಿಸಬೇಕಾಗುತ್ತದೆ. ದ್ವಿಚಕ್ರ ವಾಹನ, ರಿಕ್ಷಾ ಸಹಿತ ಎಲ್ಲಾ ಖಾಸಗಿ ವಾಹನಗಳು ಕೂಡ ಸುತ್ತು ಬಳಸಿಯೇ ನಗರಕ್ಕೆ ಪ್ರವೇಶ ಪಡೆಯಬೇಕಾಗುತ್ತದೆ.

Related posts

Leave a Reply