Header Ads
Header Ads
Breaking News

ಬಿಸಿ ನೀರಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಲಕಿ ಮೃತ್ಯು

ಬಿಸಿ ನೀರಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ7ವರ್ಷದ ಬಾಲಕಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನರಿಮೊಗರು ಗ್ರಾಮದ ಕೆಮ್ಮಿಂಜೆಯಲ್ಲಿ ನಡೆದಿದೆ.

ಕೆಮ್ಮಿಂಜೆ ಬೆದ್ರಾಳ ನಿವಾಸಿ ರಮೇಶ್ ಎಂಬವರ ಪುತ್ರಿ ತನ್ವಿ(7) ಮೃತ ಬಾಲಕಿ. ಭಾನುವಾರ ಮಧ್ಯಾಹ್ನ ಕುದಿಯುತ್ತಿದ್ದ ಬಿಸಿ ನೀರಿಗೆ ತನ್ವಿ ಆಕಸ್ಮಿಕವಾಗಿ ಬಿದ್ದು ಗಂಭೀರ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತನ್ವಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

Related posts

Leave a Reply