Header Ads
Header Ads
Header Ads
Breaking News

ಬಿ‌ಎಸ್‌ವೈ ಬಗ್ಗೆ ಮಾತನಾಡಿದರೆ ಉರಿದುಬೀಳುತ್ತಿದ್ದ ಶೋಭಾ ಮೋದಿ ಬಗ್ಗೆ ಮಾತನಾಡಿದಾಗ ಉರಿದುಬೀಳುವುದೇಕೆ ಉಳ್ಳಾಲದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್ ಪ್ರಶ್ನೆ

ಯಡಿಯೂರಪ್ಪ ಬಗ್ಗೆ ಮಾತನಾಡಿದರೆ ಉರಿದುಬೀಳುತ್ತಿದ್ದ ಶೋಭಾ ಕರಂದ್ಲಾಜೆಯವರು, ಇದೀಗ ಮೋದಿ ಬಗ್ಗೆ ಮಾತನಾಡಿದಾಗ ಉರಿದುಬೀಳಲು ಏನು ಕಾರಣ ಎಂದು ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ರಾಜಕುಮಾರ್ ಹೇಳಿದ್ದಾರೆ.

ಹರೇಕಳ ಪಂಚಾಯತ್ ವ್ಯಾಪ್ತಿಯ 59 ನೇ ವಾರ್ಡಿನ ಕಿಸಾನ್ ನಗರದಲ್ಲಿ ಹಮ್ಮಿಕೊಂಡ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮುಸ್ತಾಫ ಹರೇಕಳ ಮಾತನಾಡಿ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯ ಶೇ.90 ಅಂಶವನ್ನು ಈಡೇರಿಸಿದೆ. ಭರವಸೆಯಂತೆ ಕೊಟ್ಟ ಕಾರ್ಯಕ್ರಮದ ವಿವರಗಳ ಮಾಹಿತಿಯನ್ನು ಪುಸ್ತಕದ ಮೂಲಕ ನೀಡಿದ್ದೇವೆ. ಬಿಜೆಪಿಯವರ ನಕಲಿ ಪ್ರಚಾರದ ಕುರಿತ ವಿವರವನ್ನು ಭೇಟಿ ಮುಖೇನ ಜನರಲ್ಲಿ ಅರಿವು ಮೂಡಿಸುವುದಾಗಿ ತಿಳಿಸಿದರು.

ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮುಸ್ತಾಫ ಹರೇಕಳ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್‍ಯದರ್ಶಿ ಅಬ್ದುಲ್ ರೆಹಮಾನ್ ಕೊಣಾಜೆ, ತಾ.ಪಂ ಸದಸ್ಯರಾದ ಸುರೇಖಾ ಚಂದ್ರಹಾಸ್ , ಕ್ಲೇರಾ ಕುವೆಲ್ಲ, ಶಶಿಪ್ರಭಾ ಶೆಟ್ಟಿ, ಪದ್ಮಾವತಿ ಪೂಜಾರಿ ಮತ್ತಿತ್ತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ವರದಿ: ಆರೀಪ್ ಉಳ್ಳಾಲ

Related posts

Leave a Reply