Header Ads
Header Ads
Breaking News

ಬಿ.ಸಿ.ರೋಡಿನಲ್ಲಿ ರಸ್ತೆಯಲ್ಲಿ ನೀರು ವ್ಯರ್ಥ:ವಿ4 ನ್ಯೂಸ್ ವರದಿಗೆ ಎಚ್ಚೆತ್ತ ಇಲಾಖೆ ಅಧಿಕಾರಿಗಳು

ಬಂಟ್ವಾಳ: ಬಿ.ಸಿ.ರೋಡಿನ ಸರ್ವಿಸ್ ರಸ್ತೆಯ ಪಕ್ಕದಲ್ಲಿರುವ ವಿವೇಕ ನಗರಕ್ಕೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಕೃತಕ ಉದ್ಭವ ತೀರ್ಥಕ್ಕೆ ಮುಕ್ತಿ ಸಿಕ್ಕಿದೆ. ವಿ4ನ್ಯೂಸ್‍ನಲ್ಲಿ ವರದಿ ಪ್ರಕಟಗೊಂಡಂತೆ ಎಚ್ಚರಗೊಂಡ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪೈಪ್‍ಲೈನ್ ಸರಿಪಡಿಸಿ ವ್ಯರ್ಥವಾಗಿ ಚರಂಡಿ ಸೇರುತ್ತಿದ್ದ ಶುದ್ದ ಕುಡಿಯುವ ನೀರಿಗೆ ಪರಿಹಾರ ಒದಗಿಸಿದ್ದಾರೆ. 

ಕಾಂಕ್ರೀಟ್ ರಸ್ತೆಯ ಅಡಿಭಾಗದಲ್ಲಿರುವ ಪುರಸಭೆಯ ಕುಡಿಯುವ ನೀರಿನ ಪೈಪ್‍ಲೈನ್ ಹೊಡೆದು ಹೋಗಿ ಕೃತಕ ಉದ್ಭವ ತೀರ್ಥ ಉಂಟಾಗಿತ್ತು. ಇದರಿಂದಾಗಿ ಕಳೆದ ನಾಲ್ಕೈದು ದಿನಗಳಿಂದ ಯಥೇಚ್ಛವಾಗಿ ಕುಡಿಯುವ ನೀರು ಪೋಲಾಗುತ್ತಿದ್ದರೂ ಸಂಬಂಧ ಪಟ್ಟ ಇಲಾಖೆ ದುರಸ್ತಿ ಪಡಿಸುವ ಗೋಜಿಗೆ ಹೋಗಿರಲಿಲ್ಲ. ನೀರು ಜಿನುಗುತ್ತಿರುವ ಸ್ಥಳದಲ್ಲಿ ಕಾಂಕ್ರೀಟ್ ರಸ್ತೆ ಇದ್ದುದರಿಂದ ಪೈಪ್‍ಲೈನ್ ದುರಸ್ತಿ ಪಡಿಸುವುದು ಕೂಡ ಇಲಾಖೆಗೆ ಸವಾಲಾಗಿತ್ತು. ಇದೀಗ ವಿ4 ನ್ಯೂಸ್‍ನಲ್ಲಿ ವರದಿ ಪ್ರಕಟಗೊಂಡ ಹಿನ್ನಲೆಯಲ್ಲಿ ಒಂದೇ ದಿನದಲ್ಲಿ ಎಚ್ಚೆತ್ತುಕೊಂಡ ಇಲಾಖೆ ಬೆಳ್ಳಂಬೆಳಗೆಯೇ ಸರ್ವಿಸ್ ರಸ್ತೆ ಹಾಗೂ ನೀರು ಜಿನುಗುತ್ತಿದ್ದ ಸ್ಥಳಲ್ಲಿ ಕಾಂಕ್ರೀಟ್ ಕೊರೆದು ಹಾನಿಗೀಡಾಗಿದ್ದ ಪೈಪ್‍ಲೈನ್ ದುರಸ್ತಿ ಪಡಿಸಿದ್ದಾರೆ.

Related posts

Leave a Reply