Header Ads
Header Ads
Breaking News

ಬಿ.ಸಿ ರೋಡ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ “ನಮ್ಮ ಬೂತ್ ನಮ್ಮ ಹೊಣೆ” ಕಾರ್ಯಕ್ರಮಕ್ಕೆ ಚಾಲನೆ

ಬಂಟ್ವಾಳ: ದೇವಸ್ಥಾನಕ್ಕೆ ನಯಾಪೈಸೆ ಕೊಡದವರು ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ. ಇವರು ಹಿಂದು ಧರ್ಮದ ರಕ್ಷಕರಾಗಲು ಹೇಗೆ ಸಾಧ್ಯ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರಶ್ನಿಸಿದ್ದಾರೆ.ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಮಂಗಳವಾರ ಬಿ.ಸಿ.ರೋಡಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ “ನಮ್ಮ ಬೂತ್ ನಮ್ಮ ಹೊಣೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾನು ಮತೀಯವಾದಿಯಲ್ಲ, ಜಾತೀವಾದಿಯೂ ಅಲ್ಲ. ತನ್ನ ಧರ್ಮವನ್ನು ಆಳವಾಗಿ ಪ್ರೀತಿಸುವ ಮೂಲಕ ಇನ್ನೊಂದು ಧರ್ಮವನ್ನು ಗೌರವಿಸುತ್ತೇನೆ. ನಾವು ನಿಜವಾದ ರಾಮಭಕ್ತರು ಎಂದ ಅವರು, ಬಿಜೆಪಿಯವರು ಇನ್ನೊಂದು ಧರ್ಮವನ್ನು ಬೈಯುವ ಮೂಲಕ ಖಾಲಿ ಮತಗಳಿಕೆಯ ನಕಲಿ ರಾಮಭಕ್ತರು ಎಂದು ಹೇಳಿದರು.ಉಭಯ ಜಿಲ್ಲೆಗಳಲ್ಲಿ 333 ಅನುದಾನಿತ ಶಾಲೆಗಳಿದ್ದರೂ ಕೇವಲ ಎರಡು ಶಾಲೆಗಳಿಗೆ ಮಾತ್ರ ದೇವಸ್ಥಾನದ ಹುಂಡಿಯ ಹಣವನ್ನು ಕೊಡುವುದು ಯಾವ ನ್ಯಾಯ ಎಂದು ಸಚಿವ ರಮನಾಥ ರೈ ಪ್ರಶ್ನಿಸಿದರು. ದೇವಸ್ಥಾನದಿಂದ ಅನುದಾನ ಕೊಡುವ ವ್ಯವಸ್ಥೆ ಎಲ್ಲಿಯೂ ಇಲ್ಲ. ಅದು ಭಕ್ತರು ಹುಂಡಿಗೆ ಹಾಕಿದ ಕಾಣಿಕೆ ಹಣ. ದೇವಸ್ಥಾನದ ಹಣ ದೇವಸ್ಥಾನಕ್ಕೆ ಉಪಯೋಗಬಾಗಬೇಕು, ಶಿಕ್ಷಣ ಇಲಾಖೆಯ ಹಣ ಶಿಕ್ಷಣ ಇಲಾಖೆಗೆ ವಿನಿಯೋಗವಾಗಬೇಕು. ಭಕ್ತರು ಹುಂಡಿಗೆ ಹಾಕಿದ ಕಾಣಿಕೆಯನ್ನು ಹಣದ ರೂಪದಲ್ಲಿ ನೀಡುವುದು ಸರಿಯಲ್ಲ. ವರ್ಷಕ್ಕೆ 4 ಲಕ್ಷ ರುಪಾಯಿ ಹಣ ಈ ಎರಡು ಶಾಲೆಗಳಿಗೆ ಬರುತ್ತಿತ್ತು. ಈ ಹಣವನ್ನು ಉಳಿಸಿದ ಕೀರ್ತೀ ಸನಾತನ ಹಿಂದೂ ಧರ್ಮದ ರಮಾನಾಥ ರೈಗೆ ಸಲ್ಲುತ್ತದೆ. ಕೊಲ್ಲೂರು ತಾಯಿಯ ಆಶೀರ್ವಾದ ನನಗೆ ಖಂಡಿದೆ ಇದೆ ಎಂದು ರಮನಾಥ ರೈ ಹೇಳಿದರು. ಅಮ್ಮುಂಜೆ ಗ್ರಾ.ಪಂ. ಬಿಜೆಪಿ ಸದಸ್ಯ ಹರೀಶ್ ಅಮ್ಮುಂಜೆ, ನರಿಕೊಂಬು ಗ್ರಾ.ಪಂ. ಬಿಜೆಪಿ ಸದಸ್ಯೆ ವಿಶಾಲಾಕ್ಷಿ ಪೂಜಾರಿ ಈ ಸಂದರ್ಭ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ವೇದಿಕೆಯಲ್ಲಿಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಪಕ್ಷದ ಪ್ರಮುಖರಾದ ಯು.ಕೆ ಮೋನು, ಇಬ್ರಾಹಿಂ ಕೋಡಿಜಾಲ್, ಕೆಪಿಸಿಸಿ ವೀಕ್ಷಕ ರಾಜಶೇಖರ ಕೋಟ್ಯಾನ್, ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಮತ್ತಿತರರು ಹಾಜರಿದ್ದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply