Header Ads
Header Ads
Breaking News

ಬಿ. ಸಿ. ರೋಡ್‌ನಲ್ಲಿ ಜಾನಪದ ಕಲೋತ್ಸವ, ೧೧ ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ೧೧ ದಿನಗಳ ಕಾಲ ಬಿ. ಸಿ. ರೋಡಿನ ಗಾಣದಪಡ್ಪು ಮೈದಾನದಲ್ಲಿ ನಡೆಯಲಿರುವ ಜಾನಪದ ಕಲೋತ್ಸವಕ್ಕೆ ಅದ್ದೂರಿಯ ಚಾಲನೆ ಸಿಕ್ಕಿದೆ.
ಕಟೀಲು ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಮಕ್ಕಳಲ್ಲಿ ಅನನ್ಯವಾದ ಪ್ರತಿಭೆಗಳಿರುತ್ತದೆ ಅದನ್ನು ಗುರುತಿಸುವ ಕೆಲಸವಾಗಬೇಕು. ಸಂಸ್ಕಾರ ಕೊಡುವ, ಸಂಸ್ಕೃತಿ ಉಳಿಸುವ ಕಾರ್ಯಕ್ರಮಗಳು ನಡೆದಾಗ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದರು. ಚಲನಚಿತ್ರ ನಟ ದೇವದಾಸ ಕಾಪಿಕಾಡ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಧ್ಭುತ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಿಣ್ಣರ ಲೋಕ ಸಂಸ್ಥೆ ಬೆಳೆದಿದೆ. ಸಾಕಷ್ಟು ತರಬೇತಿ ನೀಡಿ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಈ ಸಂಸ್ಥೆ ಮಾಡಿದೆ ಎಂದರು. ಕಾರ್ಯಕ್ರಮದಲ್ಲಿ ವೀಕ್ಷಿತಾ ಜಿ. ಕುಲಾಲ್ ಹಾಗೂ ವಚನ್ ಶೆಟ್ಟಿ ಅವರಿಗೆ ಚಿಣ್ಣರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಹಶೀಲ್ದಾರ್ ಪುರಂದರ ಹೆಗ್ಡೆ ರಾಣಿ ಅಬ್ಬಕ್ಕ ಕಲಾ ಮಂಟಪವನ್ನು ಉದ್ಘಾಟಿಸಿದರು. ಚಿಣ್ಣರ ಅಧ್ಯಕ್ಷ ಅಮೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆ ಯೋಜನಾಧಿಕಾರಿ ಸುನೀತ ನಾಯಕ್, ಸಮಿತಿ ಗೌರವಾಧ್ಯಕ್ಷ ಸುದರ್ಶನ ಜೈನ್ ವೇದಿಕೆಯಲ್ಲಿದ್ದರು. ಗೌರವಾಧ್ಯಕ್ಷ ಪಿ. ಜಯರಾಮ ಶೆಟ್ಟಿ ಸ್ವಾಗತಿಸಿ, ಮೋಹನದಾಸ ಕೊಟ್ಟಾರಿ ಪ್ರಾಸ್ತವಿಕವಾಗಿ ಮಾತನಾಡಿದರು. ಅಧ್ಯಕ್ಷ ರೊನಾಲ್ಡ್ ಡಿಸೋಜಾ ವಂದಿಸಿದರು. ಶಿಕ್ಷಕ ರಾಮಚಂದ್ರರಾವ್ ಕಾರ್ಯಕ್ರಮ ನಿರೂಪಿಸಿದರು.
ಜಾನಪದೋತ್ಸವದ ಅಂಗವಾಗಿ ಜಾನಪದ ದಿಬ್ಬಣ ನಡೆಯಿತು. ಬಿ. ಸಿ. ರೋಡಿನ ಅನ್ನಪೂರ್ಣೇಶ್ವರಿ ಕಲಾ ಮಂಟಪದಲ್ಲಿ ತಹಶೀಲ್ದಾರ್ ಪುರಂದರ ಹೆಗಡೆ ಮೆರವಣಿಗೆ ಉದ್ಘಾಟಿಸಿದರು. ಅಲ್ಲಿಂದ ಗಾಣದಪಡ್ಪು ರಾಣಿ ಅಬ್ಬಕ್ಕ ಕಲಾ ಮಂಟಪದವರೆಗೆ ವೈಭವದ ಮೆರವಣಿಗೆ ನಡೆಯಿತು. ಕೀಲು ಕುದುರೆ, ಗೊಂಬೆ ಕುಣಿತ, ಬಣ್ಣದ ಕೊಡೆಗಳು, ನಾಸಿಕ್ ಬ್ಯಾಂಡ್, ಚೆಂಡೆ ವಾದನ, ಡೊಳ್ಳು ಕುಣಿತ, ಪೂಜಾ ಕುಣಿತ, ಚಿಕ್ಕಮಗಳೂರಿನ ಮಹಿಳಾ ವೀರಗಾಸೆ ಕುಣಿತ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.

Related posts

Leave a Reply