Header Ads
Breaking News

ಬಿ.ಸಿ ರೋಡ್‌ನಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥ

ಬಂಟ್ವಾಳ: 150ನೇ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಬೃಹತ್ ಜನಜಾಗೃತಿ ಜಾಥ ಬಿ.ಸಿ.ರೋಡಿನಲ್ಲಿ ನಡೆಯಿತು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ರೋಡು ಟ್ರಸ್ಟ್ ಇದರ ವತಿಯಿಂದ ಜಾಥಾ ನಡೆಯಿತು. ಕೈಕಂಬದ ಪೊಳಲಿ ದ್ವಾರದ ಬಳಿಯಿಂದ ಹೊರಟ ಆಕರ್ಷಕ ಮೆರವಣಿಗೆಗೆ ಬಣ್ಣದ ಕೊಡೆ, ಗೊಂಬೆ ಕುಣಿತ, ಶಾಲ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ವಿಶೇಷ ಮೆರುಗನ್ನು ನೀಡಿತು. ಮಧ್ಯಪಾನ ನಿಷೇದದ ಕುರಿತ ಫಲಕಗಳನ್ನು ಹಿಡಿದು ಸಾಗಿದ ಮಹಿಳೆಯರು ಹಾಗೂ ಪುರುಷರು ವಿವಿಧ ಘೋಷಣೆಗಳನ್ನು ಹಾಕಿ ಜನಜಾಗೃತಿ ಮೂಡಿಸಿದರು.

Related posts

Leave a Reply

Your email address will not be published. Required fields are marked *