Header Ads
Header Ads
Breaking News

ಬಿ.ಸಿ ರೋಡ್‌ನ ರೋಟರಿ ಸಭಾ ಭವದನದಲ್ಲಿ ಶಹರಿ ಸಮೃದ್ಧಿ ಉತ್ಸವ

ಬಂಟ್ವಾಳ: ಶಹರಿ ಸಮೃದ್ಧಿ ಉತ್ಸವವು ಬಿ.ಸಿ. ರೋಡ್‌ನ ರೋಟರಿ ಸಭಾ ಭವನದಲ್ಲಿ ನಡೆಯಿತು. ದೀನ ದಯಾಳ್ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಕಾರ್ಯಕ್ರಮ ಆಯೋಜಿಸಲಾಯಿತು.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬಂಟ್ವಾಳ ಪುರಸಭೆ ಇದರ ವತಿಯಿಂದ ರೋಟರಿ ಕ್ಲಬ್ ಸಹಯೋಗದೊಂದಿಗೆ ದೀನದಯಾಳ್ ಅಂತ್ಯೋದಯ ಯೊಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಶಹರಿ ಸಮೃದ್ದಿ ಉತ್ಸವ ನಡೆಯಿತು.ಜಿಲ್ಲಾ ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಅಭಿಯಾನ ವ್ಯವಸ್ಥಾಪಕಿ ಐರಿನ್ ರೆಬೆಲ್ಲೋ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರಕಾರದ ವಿವಿಧ ಯೊಜನೆಗಳ ಬಗ್ಗೆ ಮಾಹಿತಿ ನೀಡಿ ಅವರನ್ನು ಸ್ವಸಹಾಯ ಸಂಘಗಗಳ ಮೂಲಕ ಸಂಘಟಿಸಿ ಆರ್ಥಿಕವಾಗಿ ಬಲಾಢ್ಯ ಗೊಳಿಸುವ ಉದ್ದೇಶವನ್ನಿಟ್ಟುಕೊಂಡು ಶಹರಿ ಸಮೃದ್ದಿ ಉತ್ಸವವನ್ನು ಆಚರಿಸಲಾಗುತ್ತದೆ. ದ.ಕ. ಜಿಲ್ಲೆಯ 10 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಫೆ.1ರಿಂದ ಫೆ.15ರವರೆಗೆ ಶಹರಿ ಸಮೃದ್ದಿ ಉತ್ಸವಗಳು ನಡೆಯುತ್ತದೆ ಎಂದು ತಿಳಿಸಿದರು.ವೇದಿಕೆಯಲ್ಲಿ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಶಿಶು ಅಭಿವೃದ್ದಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಭಾರತಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಇಂಜಿನಿಯರ್ ಗಿರೀಶ್, ಎಚ್‌ಡಿಎಫ್‌ಸಿ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಹೃಷಿಕೇಶ್ ಕುಂಬ್ಲೆ, ಪುರಸಭೆಯ ಸಹಕಾರಿ ಸಂಘದ ಅಧ್ಯಕ್ಷೆ ವಸಂತಿ ಗಂಗಾಧರ, ಆಯುಷ್ಮಾನ್ ಭಾರತ್‌ನ ಜಿಲ್ಲಾ ಸಂಚಾಲಕ ಡಾ. ಜಗನ್ನಾಥ್, ಗ್ಯಾಸ್ ಏಜೆನ್ಸಿಗಳ ಸಂಪನ್ಮೂಲ ವ್ಯಕ್ತಿ ಗಣೇಶ್ ಪ್ರಸಾದ್, ಪುರಸಭೆ ಸಮುದಾಯ ಸಂಘಟಕಿ ಉಮಾವತಿ ಉಪಸ್ಥಿತರಿದ್ದರು.

Related posts

Leave a Reply