Header Ads
Header Ads
Breaking News

ಬಿ.ಸಿ. ರೋಡ್‌ನ ಸ್ಮರ್ಶಾ ಕಲಾ ಮಂದಿರದಲ್ಲಿ ವಿಶೇಷ ಚೇತನ ಮಕ್ಕಳ ಹಬ್ಬ ಕಾರ್ಯಕ್ರಮ

ಬಂಟ್ವಾಳ: ಕೊಟ್ಟರೆ ಅವಕಾಶ, ಮುಟ್ಟುವೆವು ಆಕಾಶ ಎಂಬ ಘೋಷವಾಕ್ಯದೊಂದಿಗೆ ವಿಶೇಷ ಚೇತನ ಮಕ್ಕಳ ಹಬ್ಬ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ವಿಕಲಾಂಗ ಚೇತನ ಮಕ್ಕಳನ್ನು ಅತಿಥಿಗಳು ಸನ್ಮಾನಿಸಿದರು.ಕಾರ್ಯಕ್ರಮವನ್ನುದ್ದೇಶಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ವಿಕಲ ಚೇತನ ಮಕ್ಕಳಿಗೆ ಅನುಕಂಪ ನೀಡುವ ಬದಲು ಅವಕಾಶ ನೀಡಬೇಕು, ನಾವು ಅವಕಾಶ ನೀಡಿದಾಗ ಅವರ ಜೀವನ ಮೌಲ್ಯ ಹೆಚ್ಚಾಗಲು ಸಾಧ್ಯವಿದೆ ಎಂದು ತಿಳಿಸಿದರು.ಶಾಸಕ ರಾಜೇಶ್ ನಾಕ್ ಮಾತನಾಡಿ ಕಾರ್ಯಕ್ರಮದ ಅಂಗವಾಗಿ 29 ಸಾಟಲ್‌ಗಳನ್ನು ತೆರೆಯಲಾಗಿದೆ. ಎಲ್ಲಾ ವಿಶೇಷ ಚೇತನ ಮಕ್ಕಳಿಗೆ ಅಲ್ಲಿ ಉಚಿತವಾಗಿ ವಸ್ತುಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಿರುವುದು ಅಭಿನಂದನೀಯ ಎಂದು ಶುಭ ಹಾರೈಸಿದರು.ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ಯಶಸ್ವಿ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಚೇತನ ಮಕ್ಕಳಾದ ಭಾಗ್ಯಶ್ರೀ ಹಾಗೂ ಕೌಶಿಕ್ ಅವರ ಸ್ವರಚಿತ ಕವನ ಸಂಕಲನವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಬಿಡುಗಡೆಗೊಳಿಸಿದರು. ಬಳಿಕ ವಿಶೇಷ ಸಾಧನೆ ಮಾಡಿದ ವಿಕಲಾಂಗ ಚೇತನ ಮಕ್ಕಳನ್ನು ಅತಿಥಿಗಳು ಸನ್ಮಾನಿಸಿದರು. ಬಳಿಕ ಅವರು ವಸ್ತುಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ, ಸದಸ್ಯರಾದ ಸಂಜೀವ ಪೂಜಾರಿ, ಪ್ರಭಾಕರ ಪ್ರಭು, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್, ತುಂಗಪ್ಪ ಬಂಗೇರ ಮತ್ತಿತರರು ಹಾಜರಿದ್ದರು.

ಪೋಷಕರೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸಲು ವಿವಿಧ ಖಾದ್ಯಗಳ ಸ್ಟಾಲ್ ಗಳನ್ನು ತೆರೆಯಲಾಗಿತ್ತು. ಮಕ್ಕಳಿಗೆ ವಿಶಿಷ್ಟ ಆಟದ ಸರಣಿಗಳು, ವಿಶೇಷವಾಗಿ ಸ್ವಾಗತಿಸಲು ವಾದ್ಯವೃಂದ ಹಾಗೂ ಬೊಂಬೆಗಳು ಗಮನ ಸೆಳೆಯಿತು. ಮಕ್ಕಳಿಗೆ ಕ್ಲೇ ಮಾಡೆಲಿಂಗ್, ಕ್ರಾಫ್ಟ್ ಗಳು, ವರ್ಣಮಯ ಚಿತ್ರಗಳ ರಚನೆಗೆ ಸೂಕ್ತ ವೇದಿಕೆ ಕಲ್ಪಿಸಲಾಗಿತ್ತು.

Related posts

Leave a Reply

Your email address will not be published. Required fields are marked *