Header Ads
Breaking News

ಜೆಸಿಐ ಬಂಟ್ವಾಳದ ವತಿಯಿಂದ ಬಿ.ಸಿ. ರೋಡ್‍ನಲ್ಲಿ ಕೋವಿಡ್ ಜಾಗೃತಿ ಜಾಥಾ

ಬಂಟ್ವಾಳ: ಜೆಸಿಐ ಬಂಟ್ವಾಳದ ವತಿಯಿಂದ ಕರೋನಾ ಜಾಗೃತಿ ಜಾಥ ಗುರುವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆಯಿತು. ಇಲ್ಲಿನ ಡಿವೈಎಸ್ಪಿ ಕಚೇರಿ ಬಳಿ ಬಂಟ್ವಾಳ ನಗರ ಠಾಣಾ ಇನ್ಸ್‍ಪೆಕ್ಟರ್ ಚೆಲುವರಾಜು ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭ ಜೆಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶ್ವಿನಿ ಉಪಸ್ಥಿತರಿದ್ದರು.

ಬಿ.ಸಿ.ರೋಡು ಡಿವೈಎಸ್ಪಿ ಕಚೇರಿ ಬಳಿಯಿಂದ ಆರಂಭಗೊಂಡ ಕರೋನಾ ಜಾಗೃತಿ ಜಾಥ ಕೈಕಂಬದವರೆಗೆ ತೆರಳಿ ಬಳಿಕ ವಾಪಸ್ಸು ಬಿ.ಸಿರೋಡಿಗೆ ಆಗಮಿಸಿ ಸಮಾಪನಗೊಂಡಿತು. ಈ ವೇಳೆ ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ, ವಾಹನ ಚಾಲಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಪ್ರತಿನಿತ್ಯ ಮಾಸ್ಕ್ ಧರಿಸಲು ಪ್ರೇರೆಪಿಸಲಾಯಿತು. ಕರಪತ್ರ ವಿತರಿಸಿ ಕರೋನಾ ಜಾಗೃತಿ ಮೂಡಿಸಲಾಯಿತು. ಜೇಸಿಐ ಬಂಟ್ವಾಳದ ಕಾರ್ಯದರ್ಶಿ ರೋಷನ್ ರೈ, ನಿಕಟಪೂರ್ವಾಧ್ಯಕ್ಷ ಸದಾನಂದ ಬಂಗೇರ, ಪೂರ್ವಾಧ್ಯಕ್ಷರಾದ ಸಂತೋಷ್ ಜೈನ್, ಡಾ. ಬಾಲಕೃಷ್ಣ, ದಯಾನಂದ ರೈ, ಉಪಾಧ್ಯಕ್ಷರಾದ ರಾಜೇಂದ್ರ, ಕಿಶೋರ್ ಆಚಾರ್ಯ, ಶಶಾಂಕ್‍ಶೆಟ್ಟಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಪತ್ರಕರ್ತರು, ಪೊಲೀಸ್ ಸಿಬ್ಬಂದಿಗಳು, ಯುನೈಟೆಡ್ ಟಿವಿಎಸ್‍ನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply

Your email address will not be published. Required fields are marked *