Header Ads
Header Ads
Header Ads
Breaking News

ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ನಗ- ನಗದು, ಲ್ಯಾಪ್ ಟಾಪ್ ದೋಚಿದ ದೋಚಿ ಪರಾರಿಯಾದ ಖದೀಮರು ಮಂಜೇಶ್ವರದ ಕುಂಜತ್ತೂರು ಬಳಿ ನಡೆದ ಘಟನೆ

 

ಮನೆಯ ಹಿಂಬಾಗಿಲಿನ ಬೀಗ ಮುರಿದು ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಮಂಜೇಶ್ವರದ ಕುಂಜತ್ತೂರು ಬಳಿ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ನಡೆದಿದ್ದು. ಕುಂಜತ್ತೂರು ಪಾದೆ ನಿವಾಸಿ ಜಗನ್ನಾಥ್ ಶೆಟ್ಟಿ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಲರು ಎಲ್ಲಾ ಕೊಠಡಿಗಳನ್ನು ಜಾಲಾಡಿ ಅದರೊಳಗಿದ್ದ ನಗದು ಹಾಗೂ ಆಭರಣ ಸೇರಿದಂತೆ ಇತರ ಸಾಮಾಗ್ರಿಗಳನ್ನು ಕೊಂಡೊಯ್ಯ್ದಿರುವುದು ಪತ್ತೆಯಾಗಿದೆ.
ಮನೆಯೊಳಗೆ ಕಳ್ಳರ ಬೂಟಿನ ಗುರುತು ಪತ್ತೆಯಾಗಿದೆ. ಮಂಜೇಶ್ವರ ಪೊಲೀಸರು ಆಗಮಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕುಂಜತ್ತೂರು, ಮಂಜೇಶ್ವರಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ ಎನ್ನಲಾಗಿದೆ.

Related posts

Leave a Reply