Header Ads
Header Ads
Header Ads
Breaking News

ಬೀಚ್‌ಗೆ ಬಂದವರನ್ನು ಅಡ್ಡಾಗಟ್ಟಿದ ಹಿಂಜಾವೇ ಕಾರ್ಯಕರ್ತರು ಕುಂದಾಪುರದ ಕೋಟೇಶ್ವರದಲ್ಲಿ ಬೀಚ್‌ನಲ್ಲಿ ಘಟನೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಆಂಕರ್ : ಉಡುಪಿ ಮೂಲದ ವಿದ್ಯಾರ್ಥಿಗಳು ಮತ್ತು ಅವರ ಸ್ನೇಹಿತರು ಸೋಮೇಶ್ವರದ ಬೀಚ್‌ನಲ್ಲಿ ಅಡ್ಡಾಡಿ ವಾಪಾಸಾಗುತ್ತಿದ್ದವರನ್ನು ಕೋಟೇಶ್ವರದಲ್ಲಿ ಹಿಂದೂ ಜಾಗರಣಾ ವೇದಿಕೆ ಸದಸ್ಯರು ಅಡ್ಡಗಟ್ಟಿದ ಘಟನೆ ನಡೆದಿದೆ. ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿರುವ ವಿಚಾರ ತಿಳಿದ ಕುಂದಾಪುರ ಪೊಲೀಸರು. ತಕ್ಷಣ ಕೋಟೇಶ್ವರಕ್ಕೆ ಬಂದು ಆ ವಿದ್ಯಾರ್ಥಿಗಳನ್ನು ರಕ್ಷಿಸಿ ಕುಂದಾಪುರ ಠಾಣೆಗೆ ಕರೆತಂದರು.

ನಿನ್ನೆ ಉಡುಪಿ ಮೂಲದ ವಿದ್ಯಾರ್ಥಿಗಳು ಸೋಮೇಶ್ವರದ ಬೀಚ್‌ಗೆ ಅಡ್ಡಾಡಲು ಬಂದಿದ್ದರು. ಇದರಲ್ಲಿ ಕೆಲವು ಅನ್ಯ ಕೋಮಿನ ವಿದ್ಯಾರ್ಥಿಗಳು ಇದ್ದ ಹಿನ್ನೆಲೆ, ಹಿಂದೂ ಜಾಗರಣಾ ವೇದಿಕೆಯ ಕೆಂಗಣ್ಣಿಗೆ ಗುರಿಯಾಗಿದ್ದರು.ಅಲ್ಲಿನ ಕೆಲವು ಕಾರ್ಯಕರ್ತರು ಕೋಟೇಶ್ವರದ ಹಿಂದೂ ಜಾಗರಣಾ ವೇದಿಕೆಯ ಅರವಿಂದ ಕೋಟೇಶ್ವರ್‌ಗೆ ಸೂಚನೆ ನೀಡಿದ್ದು, ಅದರಂತೆ ಈ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಆಲ್ಟೋ ಕಾರಿಗೆ ಅಡ್ಡಗಟ್ಟಿದ್ದಾರೆ. ಈ ಸಂದರ್ಭ ಸ್ಥಳಕ್ಕಾಗಮಿಸಿದ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ ಇವರನ್ನು ಅಡ್ಡಗಟ್ಟಲು ನೀವು ಯಾರು ಎಂದು ಪ್ರಶ್ನಿಸಿದ್ದು. ಈ ಸಂದರ್ಭ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

Related posts

Leave a Reply