ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಬೀಚ್ಗಳಿಗೆ ಏಕಕಾಲಕ್ಕೆ ಹಠಾತ್ ದಾಳಿ ನಡೆಸಿದ ಮಂಗಳೂರು ನಗರ ಪೊಲೀಸರು, ಅಕ್ರಮ ಚಟುವಟಿಕೆಯ ಬಗ್ಗೆ ತಪಾಸಣೆ ನಡೆಸಿದರು. ತಣ್ಣೀರುಬಾವಿ, ಪಣಂಬೂರು, ಸೋಮೇಶ್ವರ, ಸುರತ್ಕಲ್ ಬೀಚ್ಗಳಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿ ಕುಮಾರ್ ನೇತೃತ್ವದ ನಗರ ಪೊಲೀಸರ ತಂಡ ಏಕಕಾಲಕ್ಕೆ ಲಗ್ಗೆಯಿಟ್ಟು ತಪಾಸಣೆ ನಡೆಸಿತು. ಬೀಚ್ನಲ್ಲಿ ಅನಾಮಿಕರ ಸುತ್ತಾಟ, ಗಾಂಜಾ ಮತ್ತು ಡ್ರಗ್ಸ್ ಸೇರಿದಂತೆ ನಿಷೇಧಿತ ವಸ್ತುಗಳ ಸೇವನೆ, ಮದ್ಯಪಾನ ಮಾಡುವವರು ಸೇರಿದಂತೆ ನಾನಾ ರೀತಿಯಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಕಾರ್ಯಾಚರಣೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.