Header Ads
Header Ads
Breaking News

ಬೀಜಾಡಿ ಇಂದಿರಾ ಕೊಲೆ ಪ್ರಕರಣ ಪ್ರಶಾಂತ್ ಮೊಗವೀರಗೆ ಮರಣದಂಡನೆ ಕುಂದಾಪುರದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಆರೋಪ ಸಾಬೀತು

 

ಕುಂದಾಪುರದ ಬೀಜಾಡಿ ನಿವಾಸಿ ಇಂದಿರಾ ಮೊಗವೀರ ಅವರ ಅಮಾನವೀಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಪ್ರಶಾಂತ್ ಮೊಗವೀರನಿಗೆ ಕುಂದಾಪುರ ಜಿಲ್ಲಾ ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಗರ್ಭಿಣಿಯ ಅತ್ಯಾಚಾರಕ್ಕೆ 10 ವರ್ಷ, ಕಳ್ಳತನಕ್ಕೆ 10, ಅಪಹರಣ ಯತ್ನಕ್ಕೆ 4 ವರ್ಷ, ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕೆ 1ವರ್ಷ ಇದಲ್ಲದೆ ಮಹಿಳೆ ಹಾಗೂ ಹೊಟ್ಟೆಯಲ್ಲಿದ್ದ ಭ್ರೂಣದ ಹತ್ಯೆ ಪ್ರಕರಣದಲ್ಲಿ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ತೀರ್ಪು ನೀಡಿದ್ದಾರೆ.
ಏಪ್ರಿಲ್ 11, 2015ರ ಹಾಡ ಹಗಲೇ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಗೋಪಾಡಿ ಬೀಚ್ ರಸ್ತೆ ಒಂಟಿ ಮನೆಯ ನಿವಾಸಿ ಆರೂವರೆ ತಿಂಗಳ ಗರ್ಭಿಣಿ ಇಂದಿರಾ ಮೊಗವೀರ ಮಹಿಳೆಯನ್ನ ಅತ್ಯಾಚಾರಗೈದು ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಇಂದು ಕುಂದಾಪುರದ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿ ಪ್ರಶಾಂತ್ ಮೊಗವೀರನಿಗೆ ಮರಣದಂಡನಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

Related posts

Leave a Reply