Header Ads
Header Ads
Breaking News

ಬೀಜಾಡಿ ಸರ್ವೀಸ್ ರಸ್ತೆ ಕಾಮಗಾರಿ ವಿಳಂಬ: ನವಯುಗ ಕಂಪನಿ ವಿರುದ್ದ ಡಿಸಿ ಗರಂ

ಕುಂದಾಪುರ: ಕಳೆದ ಹಲವು ದಿನಗಳಿಂದ ಬೀಜಾಡಿ ಸರ್ವೀಸ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳದ ಗುತ್ತಿಗೆ ಕಂಪೆನಿ ವಿರುದ್ದ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೀಜಾಡಿಯಲ್ಲಿ ಸರ್ವೀಸ್ ರಸ್ತೆ ಅಗೆದು ಜೆಲ್ಲಿ ಹಾಕಿ ಹಾಗೆ ಬಿಟ್ಟು ನಾಪತ್ತೆಯಾಗಿದ್ದ ಗುತ್ತಿಗೆ ಕಂಪೆನಿ ನವಯುಗದ ವಿರುದ್ದ ಜಿಲ್ಲಾಧಿಕಾರಿ ಅಸಮಾಧಾನ ಹೊರಹಾಕಿದ್ದಾರೆ.

ಸ್ಥಳೀಯರ ದೂರಿನ ಮೇರೆಗೆ ನವಯುಗ ಕಂಪನಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಬಂದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಬೀಜಾಡಿ ಸರ್ವೀಸ್ ರಸ್ತೆ ಯೂ ಟನ್‌ನಿಂದ ಬೀಜಾಡಿ ವೈ ಜಂಕ್ಷನ್ ತಿರುವು ತನಕ ಕಾಲ್ನಡಿಗೆಯಲ್ಲಿ ತೆರಳಿ ಸ್ವತಃ ಪರಿಶೀಲನೆ ನಡೆಸಿ ಕಂಪನಿ ಇಂಜಿನಯರ್‌ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ದಿನನಿತ್ಯ ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಸೇರಿದಂತೆ ಸ್ಥಳೀಯರೂ ತಿರುಗಾಡುತ್ತಾರೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಯಾವುದೇ ಸೇಪ್ ಗಾರ್ಡ್‌ಗಳಿಲ್ಲ, ಇಷ್ಟೊಂದು ಅಪಾಯಕಾರಿ ಇರುವಾಗ ಕಾಲಾವಕಾಶ ಕೊಡುವ ಪ್ರಶ್ನೆಯೇ ಇಲ್ಲ ಎಂದು ಗುತ್ತಿಗೆ ಕಂಪೆನಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸೋಮವಾರದಂದು ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಕಂಪನಿಯನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿ ಕಾನೂನೂತ್ಮಾಕ ಕೇಸುಗಳನ್ನು ದಾಖಲಿಸುವುದರ ಮೂಲಕ ತುರ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಇದೇ ಸಂದರ್ಭದಲ್ಲಿ ಖಡಕ್ ಆದೇಶ ನೀಡಿದ್ದಾರೆ. ಡಿಸಿ ಭೇಟಿ ವೇಳೆ ತಹಶೀಲ್ದಾರ್ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ತರಾಟೆಗೈದ ಸ್ಥಳೀಯರು:
ಡಿಸಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯರು ನವಯುಗ ಕಂಪೆನಿ ಇಂಜಿಯರ್‌ಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಸ್ಯಾಮ್‌ಸನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇಷ್ಟು ವರ್ಷ ಕಾಮಗಾರಿ ವಿಳಂಬವಾಗಿದಲ್ಲದೇ ಸರ್ವಿಸ್ ರಸ್ತೆಯನ್ನು ಅಗೆದು ಹಾಕಿ ಸಾರ್ವಜನಿಕರು ತಿರುಗಾಡದ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಿ. ಈ ಸರ್ವೀಸ್ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಿರುಗಾಡುವಾಗ ಮೇಲ್ಬಾಗದ ಹೆದ್ದಾರಿಯಲ್ಲಿ ಓಡಾಡುವ ವಾಹನಗಳನ್ನು ಕಂಡು ಹೆದರಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಏಲ್ಲಿಯಾದರೂ ಮೇಲ್ಗಡೆ ಓಡಾಡುವ ವಾಹನ ಪಲ್ಟಿಯಾದರೇ ಇದಕ್ಕೆ ಹೊಣೆಯಾರು ಎಂದು ಅಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯೆ ವೈಲೆಟ್ ಬೆರೆಟ್ಟೂ, ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ವಾದಿರಾಜ ಹೆಬ್ಬಾರ್, ಪಿಡಿಒ ಗಣೇಶ, ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ಪತಿ ಪುತ್ರನ್, ಬೀಜಾಡಿ ಸರ್ವಿಸ್ ರೋಡ್ ಹೋರಾಟ ಸಮಿತಿ ಮುಖಂಡ ರಾಜು ಬೆಟ್ಟಿನ ಮನೆ, ಚಂದ್ರಶೇಖರ ಬೀಜಾಡಿ, ಅಣ್ಣಪ್ಪ ಬೆಟ್ಟಿನಮನೆ, ನಾರಾಯಣ ಭಂಡಾರಿ, ಅನಂತಕೃಷ್ಣ ಉಪಾಧ್ಯಾಯ, ಬೀಜಾಡಿ ಮಿತ್ರ ಸಂಗಮ ಸಂಸ್ಥೆಯ ಅಧ್ಯಕ್ಷ ಬಿ.ಜಿ.ನಾಗರಾಜ ಬೀಜಾಡಿ, ಪದಾಧಿಕಾರಿಗಳಾದ ಅನೂಪ್ ಕುಮಾರ್ ಬಿ.ಆರ್, ಮೊದಲಾದವರೂ ಇದ್ದರು.

Related posts

Leave a Reply