Header Ads
Header Ads
Breaking News

ಬೀಡಿ ಕಟ್ಟಿ ಜೀವನ ಮಾಡುತ್ತಿರುವ ಎಂಫಿಲ್ ಪದವಿಧರೆ : ಮೀಂಜದ ಮೀನಾಕ್ಷಿಯವರಿಗೆ ಬೇಕಾಗಿದೆ ಉದ್ಯೋಗದ ನೆರವು

ಉನ್ನತ ವ್ಯಾಸಂಗ ಪಡೆದು ಕೀರ್ತಿ ತಂದ ಕೊರಗ ಸಮುದಾಯದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ ಪಾತ್ರವಾದ ಮೀಂಜದ ಮೀನಾಕ್ಷಿ ಅವರು ಈಗಲೂ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ಕನ್ನಡದಲ್ಲಿ ಎಂಫಿಲ್ ಪದವಿಯನ್ನು ಪಡೆದಿದ್ದಾರೆ. ಆದರೆ ಮೀನಾಕ್ಷಿ ಅವರಿಗೆ ಉದ್ಯೋಗದ ಕನಸು ಮಾತ್ರ ಮರಿಚಿಕೆಯಾಗಿದೆ. 

ಐದು ವರ್ಷದ ಹಿಂದೆ ಈಕೆ ಸೆಲೆಬ್ರಿಟಿ. ಸ್ನಾತಕೋತ್ತರ ಪದವಿ ಪಡೆದ ಕೊರಗ ಸಮುದಾಯದ ಮೊದಲ ಮಹಿಳೆ ಎಂಬ ಕೀರ್ತಿಗೆ ಈಕೆ ಪಾತ್ರಳಾಗಿದ್ದಳು.2013ರ ಗಣರಾಜ್ಯೋತ್ಸವಕ್ಕೆ ಈಕೆಯನ್ನು ವಿಶೇಷ ಅತಿಥಿಯಾಗಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಹ್ವಾನಿಸಿದ್ದರು. ಕೊರಗ ಸಮುದಾಯದ ಭಾಷೆ ಹಾಗೂ ಸಂಸ್ಕೃತಿ ವಿಷಯದಲ್ಲಿ ಆ ಬಳಿಕ ಎಂಎಫಿಲ್ ಪದವಿಯನ್ನೂ ಪಡೆದರು. ಆದರೆ ಈ ಪ್ರತಿಭಾವಂತ ಯುವತಿ ಈಗ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ !
ಜಿಲ್ಲೆಯ ಕೊರಗ ಸಮುದಾಯದ ಎಂ.ಎ ಎಂಫಿಲ್ ಪೂರ್ಣಗೊಳಿಸಿದ ಪ್ರಥಮ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾದ ಮೀನಾಕ್ಷಿ, ಇನ್ನೂ ಸಮಾಜದ ಮುಖ್ಯವಾಹಿನಿಗೆ ತಲುಪದ ಆದಿವಾಸಿ ಸಮುದಾಯವಾದ ಕೊರಗ ವಿಭಾಗದಲ್ಲಿ ಪ್ರಥಮವಾಗಿ ಎಂಫಿಲ್ ಪಡೆದ ವಿದ್ಯಾರ್ಥಿನಿ.
ವರ್ಕಾಡಿಯ ಬೊಡ್ಡೋಡಿಯ ಶೇಖರ್ – ತುಕ್ರು ದಂಪತಿ ಪುತ್ರಿಯಾಗಿರುವ ಮೀನಾಕ್ಷಿ ಸಾಧನೆ ರಾಷ್ಟ್ರ ಮಟ್ಟದಲ್ಲೇ ಸೆಳೆದಿತ್ತು. ಕೂಲಿ ಕೆಲಸದಿಂದ ಮನೆಯ ಖರ್ಚು ವೆಚ್ಚಗಳನ್ನು ನಿಭಾಯಿಸಿ ಶಿಕ್ಷಣಕ್ಕೆ ತಂದೆ ಶೇಖರ ನೀಡಿದ ಪ್ರೋತ್ಸಾಹದಿಂದ ಉನ್ನತ ಶಿಕ್ಷಣದತ್ತ ಮುನ್ನೆಡೆಯಲು ಸಾಧ್ಯವಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣರಾದ ಮೀನಾಕ್ಷಿ ತನ್ನ ಛಲದಿಂದ ಶಿಕ್ಷಣ ಮುಂದುವರಿಸಿ ಉನ್ನತ ಶಿಕ್ಷಣ ಪಡೆದಿದ್ದಾರೆ.
ಕಾಸರಗೋಡು ಜಿಲ್ಲಾ ವ್ಯಾಪ್ತಿಯಲ್ಲಿರುವ ಕೊರಗ ಸಮುದಾಯ ಮಂದಿ ಮಾತನಾಡುವ ತುಳು ಉಪಭಾಷೆಯ ಅಪರೂಪದ ಶಬ್ದಗಳ ಸಂಗ್ರಹ ಮತ್ತು ಕೊರಗರ ಸಾಂಸ್ಕೃತಿಕ ಬದುಕಿನ ಚಿತ್ರಣ ಸಂಶೋಧನಾ ಪ್ರಬಂಧದಲ್ಲಿದೆ. ಮೀನಾಕ್ಷಿಯವರ ಎಂ.ಫಿಲ್ ಕಲಿಕೆಗೆ ಪೂರಕವಾಗಿ ಶಿಕ್ಷಣ ಇಲಾಖೆ ಲ್ಯಾಪ್ಟಾಪ್ ನೀಡಿತ್ತು. ಪ್ರಸ್ತುತ ಸರಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ಗುರಿಯನ್ನು ಮೀನಾಕ್ಷಿ ಬಡ್ಡೋಡಿ ಇರಿಸಿದ್ದಾರೆ.

Related posts

Leave a Reply

Your email address will not be published. Required fields are marked *