Header Ads
Breaking News

ಬೀಡಿ ಕಾರ್ಮಿಕರ ಕನಿಷ್ಠ ವೇತನ ತಡೆಹಿಡಿದ ಹಿನ್ನೆಲೆ. ವೇತನ ಕೂಡಲೇ ನೀಡಬೇಕೆಂದು ಆಗ್ರಹ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾಲಿಕರ ಪರ ನಿಲುವಿನಿಂದಾಗಿ ಬೀಡಿ ಮಾಲಿಕರು ಕಾರ್ಮಿಕರಿಗೆ ನೀಡಬೇಕಾದ ಕನಿಷ್ಟ ವೇತನ ೨೧೦ ರೂಪಾಯಿಯನ್ನು ತಡೆಹಿಡಿದಿದ್ದಾರೆ. ಈ ವೇತನ ಕೂಡಲೇ ನೀಡಬೇಕೆಂದು ಆಗ್ರಹಿಸಿ ಸಿಐಟಿಯು ವತಿಯಿಂದ ಮಂಗಳೂರಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ ಹಿಂದಿನ ಕಾಂಗ್ರೆಸ್ ಸರ್ಕಾರವಾಗಿರಲಿ ಅಥವಾ ಇಂದಿನ ಬಿಜೆಪಿ ಸರ್ಕಾರವಿರಲಿ ಬೀಡಿ ಕಾರ್ಮಿಕರಿಗೆ ನೀಡುವ ತುಟ್ಟಿ ಭತ್ಯೆ ಭಾರಿ ಮೋಸ ಮಾಡುತ್ತಿದೆ ಪ್ರತಿಯೊಬ್ಬ ಬೀಡಿ ಕಾರ್ಮಿಕನೂ ಕೂಡ ಈಗ ಬಹಳಾ ಕಷ್ಟದಿಂದ ಜೀವನ ನಡೆಸುತ್ತಿದೆ.ದಿನ ಬಳಕೆಯ ಪ್ರತಿಯೊಂದು ವಸ್ತುವಿಗೂ ಬೆಲೆ ಏರಿಕೆಯಾಗಿದೆ ಮತ್ತು ಟ್ರೇಡ್ ಯುನಿಯನ್‌ನ ಅಧಿಕಾರಿಗಳು ಬೀಡಿ ಕಾರ್ಮಿಕರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇನ್ನೂ ಪ್ರತಿಭಟನೆಯಲ್ಲಿ ಸಿಯಟಿಯುನ ಅಧ್ಯಕ್ಷ ವಸಂತ ಆಚಾರಿ, ಯು.ಡಿ.ಲೋಕಯ್ಯ, ಸದಾಶಿವದಾಸ್, ಪದ್ಮಾವತಿ ಶೆಟ್ಟಿ, ಬಾರತಿ ಬೋಳಾರ್, ಸೇರಿದಂತೆ ನೂರಾರು ಬೀಡಿ ಕಾರ್ಮಿಕರು ಭಾಗವಹಿಸಿದ್ದರು.

Related posts

Leave a Reply