Header Ads
Header Ads
Breaking News

ಬೀಡಿ ಕಾರ್ಮಿಕರ ಪಿಂಚಣಿಗೆ ಆಧಾರ್ ಜೋಡಣೆ ಉಚಿತ ಟೈಲರಿಂಗ್ ಮೆಷಿನ್, ಡ್ರೈವಿಂಗ್ ಲೈಸೆನ್ಸ್ ವಿತರಣೆ ರೈ ಎಸ್ಟೇಟ್ಸ್ ಜನಸೇವಾ ಕೇಂದ್ರದಿಂದ ವಿತರಣೆ

 

ಪುತ್ತೂರು: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರದ ವತಿಯಿಂದ ಪುತ್ತೂರಿನ ಬೈಪಾಸ್‌ನಲ್ಲಿರುವ ಆರ್‌ಇಬಿ ಎನ್‌ಕ್ಲೇವ್‌ನ ಕಚೇರಿಯಲ್ಲಿ ಬೀಡಿ ಕಾರ್ಮಿಕರ ಪಿಂಚಣಿಗೆ ಆಧಾರ್ ಕಾರ್ಡ್ ಜೋಡಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಉದ್ಯಮಿ ಹಾಗೂ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಎಸ್. ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಸರಕಾರದ ಯಾವುದೇ ಸವಲತ್ತುಗಳು ಸಿಗಬೇಕಾದರೆ ಆಧಾರ್ ಕಾರ್ಡ್ ಜೋಡಣೆ ಅತ್ಯಂತ ಕಡ್ಡಾಯವಾಗಿದೆ. ಅದರಲ್ಲೂ ಬೀಡಿ ಕಾರ್ಮಿಕರಿಗೆ ಇದು ಅವಶ್ಯಕ. ಈ ನಿಟ್ಟಿನಲ್ಲಿ ಬೀಡಿ ಕಾರ್ಮಿಕರ ಪಿಂಚಣಿಗೆ ಆಧಾರ್ ಕಾರ್ಡ್ ಜೋಡಣೆಯನ್ನು ಟ್ರಸ್ಟ್ ವತಿಯಿಂದ ಉಚಿತವಾಗಿ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸುಮಾರು ೫೦೦ಕ್ಕೂ ಮಿಕ್ಕಿ ಬೀಡಿ ಕಾರ್ಮಿಕರು ತಮ್ಮ ಪಿಂಚಣಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸಿದರು. ಈ ಸಂದರ್ಭ ೫ ಮಂದಿಗೆ ಉಚಿತ ಡ್ರೈವಿಂಗ್ ಲೈಸೆನ್ಸ್ ಹಾಗೂ ೧೬ ಮಂದಿ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲಾಯಿತು. ೪೫ ದಿನಗಳ ಹೊಲಿಗೆ ಯಂತ್ರ ತರಬೇತಿ ಶಿಬಿರದ ಮೊದಲ ಬ್ಯಾಚ್ ಮುಕ್ತಾಯಗೊಂಡಿದ್ದು, ೨ನೇ ಬ್ಯಾಚ್ ಶೀಘ್ರವೇ ಆರಂಭವಾಗಲಿದೆ ಎಂದು ಅಶೋಕ್ ರೈ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹೊಲಿಗೆ ತರಬೇತಿ ಶಿಬಿರದ ತರಬೇತುದಾರೆ ಲತಾ, ಕೃಷ್ಣಪ್ರಸಾದ್, ಸಿಬಂದಿಗಳಾದ ಅಪೇಕ್ಷಾ, ಮಹೇಶ್, ವಿಜಿತ್, ಲಿಂಗಪ್ಪ ಉಪಸ್ಥಿತರಿದ್ದರು.
ವರದಿ: ಅನೀಶ್ ಪುತ್ತೂರು

Related posts

Leave a Reply