Header Ads
Header Ads
Header Ads
Breaking News

ಬೀಡಿ ಕಾರ್ಮಿಕರ ಮುಷ್ಕರಕ್ಕೆ ಸ್ಪಂದಿಸಿದ ಮಾಲಕರು ಹೆಚ್ಚುವರಿ ಕಮಿಷನ್ ನೀಡುವುದಾಗಿ ಭರವಸೆ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಘಟನೆಗಳ ಬೀಡಿ ಗುತ್ತಿಗೆದಾರ ಸಂಘದವರು ನಡೆಸಿದ ಮುಷ್ಕರಕ್ಕೆ ಕೊನೆಗೂ ಮಾಲಕರು ಸ್ಪಂದಿಸಿದ್ದಾರೆ. ಒಂದು ಸಾವಿರ ಬೀಡಿಗೆ 2 ರೂಪಾಯಿ ಹೆಚ್ಚುವರಿ ನೀಡುವುದಾಗಿ ಮಾಲಕರು ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಸಂಘದ ಉಪಾಧ್ಯಕ್ಷ ಕಬೀರ್ ಮಾಹಿತಿ ನೀಡಿ 2017 18 ನೇ ಸಾಲಿನಲ್ಲಿ ಬೀಡಿ ಗುತ್ತಿಗೆದಾರರಿಗೆ ಮಾಲಕರು ನೀಡಬೇಕಾಗಿದ್ದ ಹೆಚ್ಚುವರಿ ಕಮಿಶನ್‌ಗಾಗಿ ಹಲವು ಬಾರಿ ಮಾಲಕರಿಗೆ ಮನವಿಯನ್ನು ಸಲ್ಲಿಸಿದ್ದೇವು. ಬಳಿಕ ಸ್ಪಂದಿಸದೇ ಇದ್ದಾಗ ವಿವಿಧ ಬೀಡಿ ಗುತ್ತಿಗೆದಾರರ ಸಂಘಟನೆಗಳು ಅನಿರ್ದಿಷ್ಠಾವಧಿ ಸರಣಿ ಮುಷ್ಕರ ಕೈಗೊಂಡೆವು ಅನಂತರ ಮಾಲಕರು ಮಾತುಕತೆಗೆ ಆಹ್ವಾನಿಸಿ ಹೆಚ್ಚುವರಿ ಕಮಿಷನ್ ನೀಡುವುದಾಗಿ ಒಪ್ಪಿಕೊಂಡರು ಎಂದು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕೃಷ್ಣ ರೈ, ಕೃಷ್ಣಪ್ಪ ತೊಕ್ಕೊಟ್ಟು, ಗಂಗಾಧರ್ ಶೆಟ್ಟಿ, ಅಬ್ದುಲ್ ಖಾದರ್ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply