Header Ads
Header Ads
Breaking News

ಬೀಡಿ ಕಾರ್ಮಿಕರ ಸಮಸ್ಯೆಗೆ ಮಾಲಕರು ಸ್ಪಂದಿಸಲಿ:ಮಾಜಿ ಸಚಿವ ರಮಾನಾಥ ರೈ ಹೇಳಿಕೆ

ಬೀಡಿ ಕಾರ್ಮಿಕರ ಹಿತದೃಷ್ಟಿಯಿಂದ ಬೀಡಿ ಮಾಲಕರು ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಬೇಕೆಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬೀಡಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಸರಕಾರದ ಜೊತೆ ಕನಿಷ್ಟ ಕೂಲಿ ಬಗ್ಗೆ ಮಾತುಕತೆ ಆಗಿದೆ. ಆದರೆ ಇವತ್ತು ಬೀಡಿ ಕಾರ್ಮಿಕರು ಪ್ರತಿಭಟಿಸುತ್ತಿದ್ದಾರೆ.

ತ್ರಿಪಕ್ಷ ಒಪ್ಪಂದ ಪ್ರಕಾರ ಕನಿಷ್ಟ ಕೂಲಿಗೆ ಸರ್ವಾನುಮತ ಪಡೆಯಲಾಗಿದೆ.ಏಪ್ರಿಲ್ ನಿಂದ 210 ರೂ. ನೀಡುವ ಒಪ್ಪಂದವಾಗಿದೆ ಆದರೆ ಮಾಲಕರು ಕಾರ್ಮಿಕರಿಗೆ ಬಾಕಿ ಇರಿಸಿಕೊಂಡಿದ್ದಾರೆ. ಗ್ರಾಮೀಣ ನಿರುದ್ಯೋಗಿಗಳು ಬೀಡಿಯನ್ನು ಅವಲಂಬಿಸಿಕೊಂಡಿದ್ದಾರೆ. ಹೀಗಾಗಿ ಬೀಡಿ ಕಾರ್ಮಿಕರ ಹಿತ ದೃಷ್ಟಿಯಲ್ಲಿ ಬೀಡಿ ಮಾಲಕರು ಸ್ಪಂದಿಸಬೇಕೆಂದು ಎಂದು ಆಗ್ರಹಿಸಿದರು. ಇನ್ನು ಗ್ಯಾಸ್ ಅನಿಲ್ ಸಾವಿರ ರೂಪಾಯಿ ತಲುಪುತ್ತಿದೆ.ಕೇಂದ್ರ ಸರಕಾರ ಬಡವರ ವಿರೋಧಿ ನೀತಿ ಅನುಸರಿಸುತ್ತಿದೆ. ಮಾಜಿ ಸಿಎಂಸಿದ್ದರಾಮಯ್ಯ ನೀಡಿದ್ದ ಯೋಜನೆಯಿಂದಾಗಿ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ಸುಧಾರಿತವಾಗಿದೆ ಅಂತಾ ಹೇಳಿದರು.

Related posts

Leave a Reply