Header Ads
Breaking News

ಬೀಡಿ ನೀಡಲು ಬಂದಿದ್ದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ

ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಬೆಳಾಲು ಪರಿಸರದಲ್ಲಿ ಬೀಡಿ ಬ್ರ್ಯಾಂಚ್ ಹೊಂದಿರುವ ಸಲೀಂ ಎಂಬ ಕಾಮುಕ ವ್ಯಕ್ತಿಯು ಬೀಡಿ ನೀಡಲು ಬಂದಿದ್ದ ಹಿಂದೂ ಯುವತಿಯ ಮೇಲೆ ಹಾಡುಹಗಲೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿತ್ತು.ಅವರ ಮನೆಗೆ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳಿ ಕೃಷ್ಣ ಹಸಂತ್ತಡ್ಕ ಅವರು ಭೇಟಿ ನೀಡಿ ಮನೆಯವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಹಾಗೂ ಸಲೀಂನಂತಹ ಕಾಮುಕರು ಹಾಗೂ ಆತನ ಮನೆಯವರು ಇನ್ನೂ ಮುಂದೆ ಈ ಪರಿಸರದಲ್ಲಿ ಬೀಡಿ ತೆಗೆದುಕೊಳ್ಳುವ ವ್ಯಾಪಾರಕ್ಕೆ ಇಳಿಯಬಾರದು ಇಳಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಹಾಗೂ ಈ ಗ್ರಾಮದ ಯಾರೂ ಕೂಡ ಇಂತಹ ಕಾಮುಕ ಮತಾಂದನಿಗೆ ಬೆಂಬಲ ಕೊಡಬಾರದು ಎಂದು ಮುರಳಿ ಕೃಷ್ಣ ಹಸಂತ್ತಡ್ಕ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *