Breaking News

ಬೀಡಿ ವರ್ಕರ್‍ಸ್ ಫೆಡರೇಶನ್‌ನಿಂದ ಹಕ್ಕೊತ್ತಾಯ ಚಳುವಳಿ, 2016-17ನೇ ಸಾಲಿನ ತುಟ್ಟಿಭತ್ಯೆ ಪಾವತಿಗೆ ಆಗ್ರಹಿಸಿ ಪ್ರತಿಭಟನೆ


2016-17ನೇ ಸಾಲಿನ ತುಟ್ಟಿ ಭತ್ತೆ ಪಾವತಿಗೆ ಆಗ್ರಹಿಸಿ ಎಐಟಿಯುಸಿ ಬೀಡಿ ವರ್ಕರ್ಸ್ ಫೆಡರೇಶನ್ ನೇತೃತ್ವದಲ್ಲಿ ಬೀಡಿ ಕಾರ್ಮಿಕರಿಂದ ಹಕ್ಕೊತ್ತಾಯ ಚಳವಳಿ ನಗರದ ಕದ್ರಿ ಸಮೀಪದಲ್ಲಿರುವ ಉಪ ಕಾರ್ಮಿಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ನಡೆಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಕಾರ್ಮಿಕರಿಗೆ ನೀಡಬೇಕಾದ ತುಟ್ಟಿ ಭತ್ತೆ ನೀಡದೇ ಮಾಲಕರು ವಂಚನೆ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಸುರೇಶ್ ಕುಮಾರ್ ಬಂಟ್ವಾಳ ಆರೋಪಿಸಿದರು. ಈ ವೇಳೆ ಪ್ರಧಾನ ಕಾರ್ಯದರ್ಶಿ ವಿ. ಸೀತಾರಾಂ, ಬಿ. ಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Related posts

Leave a Reply